ಮಣಿಪಾಲ: ಶಿಕ್ಷಣ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಗಿಂತ ಹೆಚ್ಚು ಸೇವೆ ಸಲ್ಲಿಸಿರುವ Dr. T.M.A. Pai Polytechnic ನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.
ಎಐಸಿಟಿಇ ಅನುಮೋದನೆ ಹಾಗೂ ಕರ್ನಾಟಕ ಸರ್ಕಾರದ ಡಿಟಿಇಗೆ ಸಂಯೋಜಿತವಾಗಿರುವ ಈ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ, ತಾಂತ್ರಿಕ ಶಿಕ್ಷಣದಲ್ಲಿ ಗುಣಮಟ್ಟದ ಬೋಧನೆಗೆ ಹೆಸರಾಗಿದೆ. “ಇಂದು ಕಲಿಯಿರಿ, ನಾಳೆ ನಾಯಕತ್ವ ವಹಿಸಿರಿ” ಎಂಬ ಧ್ಯೇಯವಾಕ್ಯದೊಂದಿಗೆ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಸಂಸ್ಥೆ ಒತ್ತು ನೀಡುತ್ತಿದೆ.
ಯಾವೆಲ್ಲ ಕೋರ್ಸ್ ಗಳಿವೆ?
- ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್
- ಕೃತಕ ಬುದ್ಧಿಮತ್ತೆ
- ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬಿಗ್ ಡೇಟಾ
- ಆಟೊಮೊಬೈಲ್ ಎಂಜಿನಿಯರಿಂಗ್
- ಸಿವಿಲ್ ಎಂಜಿನಿಯರಿಂಗ್ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನಿಯರಿಂಗ್
- ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್
- ಮೆಕ್ಯಾನಿಕಲ್ ಎಂಜಿನಿಯರಿಂಗ್
- ಮೆಕ್ಯಾಟ್ರಾನಿಕ್ಸ್ ಎಂಜಿನಿಯರಿಂಗ್
- ಪ್ರಿಂಟಿಂಗ್ ತಂತ್ರಜ್ಞಾನ
ಯಾರು ಸೇರಬಹುದು?
ಎಸ್‌ಎಸ್‌ಎಲ್‌ಸಿ ಉತ್ತೀರ್ಣರು ಹಾಗೂ ಪಿಯುಸಿ ಪಾಸ್/ಫೇಲ್ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಹರಾಗಿದ್ದು, ಪಿಯುಸಿ ವಿಜ್ಞಾನ ಹಾಗೂ ಐಟಿಐ ವಿದ್ಯಾರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ದ್ವಿತೀಯ ವರ್ಷದ ಪ್ರವೇಶ ಅವಕಾಶವೂ ಇದೆ.
ಮೂರು ವರ್ಷಗಳ (ಆರು ಸೆಮಿಸ್ಟರ್) ಡಿಪ್ಲೊಮಾ ಕೋರ್ಸ್‌ಗಳೊಂದಿಗೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸೌಲಭ್ಯವೂ ಲಭ್ಯವಿದೆ. ವಿಶೇಷವಾಗಿ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬಿಗ್ ಡೇಟಾ ವಿಭಾಗದಲ್ಲಿ ವಿದ್ಯಾರ್ಥಿವೇತನ ಆಸನಗಳನ್ನು ಕಲ್ಪಿಸಲಾಗಿದೆ.
ಸಂಪರ್ಕಿಸಿ: ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್, ಈಶ್ವರ ನಗರ, ಮಣಿಪಾಲ – 576104
ಕಾಲ್ ಮಾಡಿ: 98447 29291 / 74831 82179 / 83102 76314 / 94805 75730

















