ಕಾರ್ಕಳ: ಸಾಹಿತಿ, ಉಪನ್ಯಾಸಕ, ತುಳುನಾಡಿನ ಜಾನಪದ ಮತ್ತು ದೈವಾರಾಧನೆಯ ಬಗ್ಗೆ ಆಳವಾದ ಪಾಂಡಿತ್ಯ ಹೊಂದಿದ್ದ ಕಾರ್ಕಳದ ಡಾ. ಮರಿಣಾಪುರ ಸುರೇಶ(ಮಸುಮಾ)(47)ಅವರು ಗುರುವಾರ ಅಸೌಖ್ಯದಿಂದ ನಿಧನ ಹೊಂದಿದ್ದಾರೆ.
ಅವರು ಕೆಲವು ತಿಂಗಳಿಂದ ಅನಾರೋಗ್ಯಕ್ಕೊಳಗಾಗಿದ್ದರು. ಉಡುಪಿ ಜಿಲ್ಲೆಯ ಹೆಬ್ರಿ, ಕಾರ್ಕಳದ ಎಂಪಿಎಂ ಕಾಲೇಜಿನಲ್ಲಿ, ಮೂಲ್ಕಿಯ ವಿಜಯ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ೧೫ ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ನೇರ ನಡೆ ನುಡಿಯವರಾದ ಇವರು ಕಾದಂಬರಿ, ಕವನ ಸಂಕಲನ, ಕತಾ ಸಂಕಲನ ಸೇರಿದಂತೆ ಹಲವು ವಿಭಾಗದಲ್ಲಿ ಗಾಢವಾದ ಸಾಹಿತ್ಯ ಕೃಷಿ ಮಾಡಿದ್ದರು. ಪ್ರತಿಷ್ಟಿತ ಪ್ರಶಸ್ತಿಗಳೂ ಇವರಿಗೆ ಸಂದಿತ್ತು.ಬಡತನದಿಂದ ಬೆಳೆದ ಇವರಿಗೆ ಕೆಲವೊಂದು ವ್ಯವಸ್ಥೆಯ ಕುರಿತು ಆಕ್ರೋಶ, ನೋವು ಇತ್ತು. ಅದನ್ನು ತಮ್ಮ ಸಾಹಿತ್ಯದಲ್ಲಿ ವ್ಯಕ್ತಪಡಿಸುತ್ತಿದ್ದರು. ಕಾರ್ಕಳದ ಹಲವಾರು ವಿದ್ಯಾರ್ಥಿಗಳ ನೆಚ್ಚಿನ ಉಪನ್ಯಾಸಕರೂ ಆಗಿದ್ದರು.