ಉಡುಪಿ: ಲಯನ್ಸ್ ಕ್ಲಬ್ ಉಡುಪಿ ವತಿಯಿಂದ ನೀಡುವ ‘ಲಯನ್ಸ್ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಮಣಿಪಾಲ ಕೆಎಂಸಿಯ ನೇತ್ರ ತಜ್ಞೆ ಡಾ. ಸುಲತಾ ವಿ. ಭಂಡಾರಿ ಅವರಿಗೆ ನ. 28ರಂದು ಉಡುಪಿ ಲಯನ್ಸ್ ಭವನದಲ್ಲಿ ಪ್ರದಾನ ಮಾಡಲಾಯಿತು.
ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ವರ್ವಾಡಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಖ್ಯಾತ ಮನೋವೈದ್ಯ ಡಾ. ಪಿ. ವಿ. ಭಂಡಾರಿ ಅವರು ತಮ್ಮ ಕನ್ನಡ ರಾಜ್ಯೋತ್ಸವ ಆಶಯ ಭಾಷಣದಲ್ಲಿ ಕನ್ನಡ ಭಾಷೆ ಮಾತನಾಡುವವರು ಹೆಮ್ಮೆ ಪಡಬೇಕಾದ ಅಗತ್ಯದ ಬಗ್ಗೆ ವಿವರಿಸಿದರು.
ಹಿರಿಯ ವೈದ್ಯರೂ, ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಡಾ. ಎ. ರವೀಂದ್ರನಾಥ ಶೆಟ್ಟಿ, ಲಯನ್ಸ್ ಕಾರ್ಯದರ್ಶಿ ಅಲೆವೂರು ದಿನೇಶ್ ಕಿಣಿ, ಕೋಶಾಧಿಕಾರಿ ಲೂಯಿಸ್ ಲೋಬೋ ಲಯನ್ ಲೇಡಿ ಕೌನ್ಸಿಲ್ ಅಧ್ಯಕ್ಷೆ ರೂಪಾ ಡಿ. ಕಿಣಿ, ಕಾರ್ಯದರ್ಶಿ ಚಂದ್ರಿಕಾ ರವೀಶ್, ಕೋಶಾಧಿಕಾರಿ ಮಮತಾ ಶೆಟ್ಟಿ, ಲಿಯೊ ಕ್ಲಬ್ ಕೋಶಾಧಿಕಾರಿ ಅಭಿನವ್ ಕಿಣಿ ಉಪಸ್ಥಿತರಿದ್ದರು.












