ನಿಟ್ಟೆಯ ಡಾ| ಎನ್.ಎಸ್.ಎ.ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಗೆ 615 ಅಂಕ

ನಿಟ್ಟೆ:ಎಸ್.ಎಸ್.ಎಲ್.ಸಿ. ಉತ್ತರ ಪತ್ರಿಕೆಯ ಮರುಮೌಲ್ಯಮಾಪನದ ಫಲಿತಾಂಶದಲ್ಲಿ  ನಿಟ್ಟೆಯ ಡಾ| ಎನ್.ಎಸ್.ಎ.ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ‘ಸಾತ್ವಿಕ್’ 615 ಅಂಕಗಳನ್ನು ಗಳಿಸಿ ಕನ್ನಡ ಮಾಧ್ಯಮದಲ್ಲಿ ಕಾರ್ಕಳ ತಾಲೂಕಿಗೆ ಪ್ರಥಮ ಹಾಗೂ ಉಡುಪಿ ಜಿಲ್ಲೆಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಈ ವಿದ್ಯಾರ್ಥಿಯು ಮರುಮೌಲ್ಯಮಾಪನದಲ್ಲಿ 34 ಹೆಚ್ಚುವರಿ ಅಂಕಗಳನ್ನು ಗಳಿಸಿದ್ದಾರೆ.