ಉಡುಪಿ: ಉಡುಪಿಯ ಡಾ. ಮಹಾಬಲೇಶ್ವರ ರಾವ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2019ರ ಮಾನವಿಕ ವಿಭಾಗದಲ್ಲಿ ‘ಶಿಕ್ಷಣದಲ್ಲಿ ಭಾಷೆ ಮತ್ತು ಮಾಧ್ಯಮದ ಸಮಸ್ಯೆಗಳು’ ಎಂಬ ಕೃತಿಗೆ ಬಹುಮಾನ ಬಂದಿದ್ದು ಲೇಖಕರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸದ ಕಾರಣ ಭಾನುವಾರ ಮನೆಯಲ್ಲೇ ಬಹುಮಾನ ನೀಡಿ ಗೌರವಿಸಲಾಯಿತು.
ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ. ಬಿ.ವಿ.ವಸಂತ ಕುಮಾರ್, ಸದಸ್ಯರಾದ ಡಾ. ಶರಭೇಂದ್ರ ಸ್ವಾಮಿ, ರಿಜಿಸ್ಟ್ರಾರ್ ಎನ್.ಕರಿಯಪ್ಪ ಲೇಖಕರ ಮನೆಗೇ ಬಂದು ಶಾಲು ಹೊದೆಸಿ ಬಹುಮಾನ ವಿತರಿಸಿದರು.
ರಾಮಾಂಜಿ, ನರಸಿಂಹ ಮೂರ್ತಿ, ಹರೀಶ್ ಕುಮಾರ್, ಸುಕನ್ಯಾ ಕಳಸ ಹಾಗೂ ಇತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.