ವರದಿ : ಚರಣ್ ಸಂಪತ್ ಕಾರ್ಕಳ
ಕಾರ್ಕಳ : ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಹಾಗೂ ಜನಪರ ಅಭಿವೃದ್ಧಿಯ ಕಾಳಜಿ ಹೊಂದಿರುವ ಕುಂದಾಪುರ ಸಹಾಯಕ ಕಮೀನಷನರ್ ಡಾ ಮಧುಕೇಶ್ವರ್ ಕಾರ್ಕಳ ಪುರಸಭೆ ಆಡಳಿತಾಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಿದ್ದೆಗೆ ಜಾರಿದ ಕಾರ್ಕಳ ಪುರಸಭೆಯನ್ನು ಒಮ್ಮೆಲೇ ನಿದ್ದೆಯಿಂದ ಎಬ್ಬಿಸದ್ದಾರೆ. ಕುಂಠಿತಗೊಂಡ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಚುರುಕುಗೊಳಿಸಿದ್ದಾರೆ.
ಯಸ್. ಕಳೆದ ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದ ಹಲವಾರು ಕಾಮಗಾರಿಗಳಿಗೆ ಜೀವ ತುಂಬುವಂತಹ ಕೆಲಸವನ್ನು ಕುಂದಾಪುರ ಸಹಾಯಕ ಕಮಿಷನರ್ ಹಾಗೂ ಕಾರ್ಕಳ ಪುರಸಭೆ ಅಡಳಿತಾಕಾರಿ ಡಾ ಮಧುಕೇಶ್ವರ್ ಮಾಡುವ ಮೂಲಕ ಇದೀಗ ಸುದ್ದಿಯಾಗಿದ್ದಾರೆ.
ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ನೀಡುವ ಉದ್ದೇಶ ನಮ್ಮದಾಗಬೇಕು ಅದಕ್ಕಾಗಿ ಸಾಧ್ಯವಾದಷ್ಟು ನಿರಂತರ ಜನತೆಯ ಸಂಪರ್ಕದಲ್ಲಿರ ಬೇಕು ಎಂದು ಕಾರ್ಯರಂಗಕ್ಕಿಳಿದ ಮಧಕೇಶ್ವರ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡ್ತಾರೆ:
ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಜನತೆಯ ಸಮಸ್ಯೆಯನ್ನು ಅಲಿಸಿ ಹಲವಾರು ಸಮಸ್ಯೆಗೆ ಸ್ಥಳದಲ್ಲೇ ಪರಿಹಾರವನ್ನು ಕಂಡುಕೊಳ್ಳುವ ಕೆಲಸ ಮಾಡಿದ್ದಾರೆ ಮಧುಕೇಶ್ವರ್.
ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ತೆಗೆದು ಕೊಂಡ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲೇಬೇಕು. ಮುಂದಿನ ಸಭೆಯಲ್ಲಿ ಮತ್ತೆ ಅದೇ ವಿಚಾರದಲ್ಲಿ ಚರ್ಚೆಗೆ ಅವಕಾಶ ಕೊಡಬಾರದು. ಸಭೆಯಲ್ಲಿ ನಿರ್ಣಯಗೊಂಡ ಯಾವುದೇ ಕೆಲಸ ಕಾಮಗಾರಿ ಬಗ್ಗೆ ನಿರ್ಲಕ್ಷ್ಯ ವಹಿಸಬಾರದೆಂದು ಅಧಿಕಾರಿಗಳಿಗೆ ಖಡಕ್ಎಚ್ಚರಿಕೆಯನ್ನು ಈ ಅಧಿಕಾರಿ ನೀಡಿದ್ದಾರೆ.
ಕೆಲಸ ಮಾಡದ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್
ಸರಕಾರಿ ಕೆಲಸ ದೇವರ ಕೆಲಸ ,ಸರಕಾರಿ ಕಚೇರಿಗೆ ಬಂದಾಗ ಸಾರ್ವಜನಿಕರಿಗೆ ,ಹಿರಿಯರಿಗೆ ಸತಾಯಿಸದೇ ಕೂಡಲೇ ಅವರಿಗೆ ಸ್ಪಂದಿಸುವ ಕೆಲಸವಾಗಬೇಕು. ದೂರು ಬಂದಲ್ಲಿ ನಿಮ್ಮ ಮೇಲೆ ಸೂಕ್ತ ಕ್ರಮ ಕೈಗೊಳ್ಳತ್ತೇನೆ. ಅಲ್ಲದೆ ಸರಕಾರಿ ಹಣವನ್ನು ದುರುಪಯೋಗ ಮಾಡಿದ್ದಲ್ಲಿ ಆ ಅಧಿಕಾರಿಯ ವೇತನದಿಂದ ಅದನ್ನು ಭರಿಸುವ ಕೆಲಸ ಮಾಡಲಾವುದು ಎಂದು ಅಧಿಕಾರಿಗಳಿಗೆ ಖಢಕ್ ಸಂದೇಶ ನೀಡಿದ್ದಾರೆ ಡಾ.ಮಧುಕೇಶ್ವರ್.
ನಮ್ಮಲ್ಲಿನ ಯಾವುದೇ ಸಮಸ್ಯೆಯನ್ನು ಅವರ ಗಮನಕ್ಕೆ ತಂದರೆ ಕೂಡಲೇ ಸ್ಪಂದಿಸುವ ಕೆಲಸ ಮಾಡುತ್ತಾರೆ.
ಕಳೆದ ಬಾರಿ ರಸ್ತೆ ಯಲ್ಲಿನ ಹೊಂಡದ ಕುರಿತು ಮೊಬೈಲ್ ನಲ್ಲಿ ಸಂದೇಶ ಹಾಕುವ ಮೂಲಕ ಅವರ ಗಮನಕ್ಕೆ ತಂದಿದ್ದೆವು. ಮೇಸೆಜ್ ಗೆ ಉತ್ತರ ನೀಡಿದ ಅವರು ಕಾರ್ಯೋನ್ಮುಖರಾಗಿ ಮರುದಿನವೇ ಹೊಂಡ ಮುಚ್ಚಿಸಿದ್ದಾರೆ. ಇಂತಹ ಅಧಿಕಾರಿ ಸಿಗುವುದು ಬಹಳ ವಿರಳ ಎನ್ನುತ್ತಾರೆ ಕಾರ್ಕಳದ ನಾಗರಿಕರಾದ ಲಕ್ಷೀ ಚರಣ್.