‘ಆರೋಗ್ಯವೇ ಭಾಗ್ಯ’ ಎಂಬುದು ತಿಳಿದಿದ್ದರೂ, ಇಂದಿನ ವೇಗದ ಬದುಕಿನ ಶೈಲಿ ಮತ್ತು ದಿನಚರಿಯ ಕ್ರಮಗಳು ನಮ್ಮಆರೋಗ್ಯವನ್ನು ಸೂಕ್ಷ್ಮವಾಗಿಸಿವೆ. ಇಂದಿನ ದಿನ ಮನೆಯ ಕೆಲಸದಿಂದ ಹಿಡಿದು ಉದ್ಯೋಗದವರೆಗೂ ನಿಂತು ಮಾಡುವ ಕೆಲಸಗಳು ಅಥವಾ ಸುಧೀರ್ಘಕಾಲ ಕುಳಿತುಕೊಂಡು ಮಾಡುವ ಕೆಲಸಗಳೇ ಹೆಚ್ಚು. ಹೀಗೆ ಸತತ ನಿಲ್ಲುವಿಕೆಯು ಕೆಲವೊಮ್ಮೆ ಕಾಲಿನ ರಕ್ತನಾಳಗಳ ಉಬ್ಬುವಿಕೆಗೆ ಕಾರಣವಾಗುತ್ತದೆ. ಇದಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ “ವೆರಿಕೋಸ್ ವೈನ್ಸ್” ಎನ್ನುತ್ತಾರೆ.
ಇದರಿಂದುಂಟಾಗುವ ನೋವು ಕ್ರಮೇಣ ಹೆಚ್ಚಾಗಿ, ಚರ್ಮಕಪ್ಪಾಗುವಿಕೆ ಮತ್ತು ತುರಿಕೆ ಗಾಯವಾಗಿ, ಶಸ್ತ್ರಚಿಕಿತ್ಸೆಯಿಂದ ಬೆರಳು ಅಥವಾ ಕಾಲುಗಳನ್ನು ಕತ್ತರಿಸುವ ಹಂತವನ್ನು ಮುಟ್ಟುತ್ತದೆ. ಈಗೀಗ ವಯೋಮಾನದ ಭೇದವಿಲ್ಲದೆ ಎಲ್ಲರನ್ನೂಕಾಡುತ್ತಿರುವ ‘ವೆರಿಕೋಸ್ ವೈನ್ಸ್’ ನಮ್ಮ ವೃತ್ತಿ ಜೀವನದಿಂದ, ಆಹಾರ ಮತ್ತು ಆಹಾರ ಕ್ರಮಗಳಲ್ಲಿನ ವ್ಯತ್ಯಾಸಗಳಿಂದ ಉಂಟಾಗಿರುವ ಪಿಡುಗಾಗಿ ಕಾಡಲಾರಂಭಿಸಿದೆ. ಈ ಸಮಸ್ಯೆಯನ್ನು ತಡೆಗಟ್ಟುವಲ್ಲಿ ಸರ್ಜರಿ ರಹಿತ ಚಿಕಿತ್ಸೆ ಹಾಗೂ ಮರುಕಳಿಸದಂತೆ ತಡೆಯಲು ‘ಉರಾಳ್ ವೆರಿಕೋಸ್ ವೈನ್ಸ್ ಆಯುರ್ವೇದಿಕ್ ಕೇರ್’ನ 15 ವರ್ಷಗಳ ಸತತ ಆವಿಷ್ಕಾರ ಫಲದಾಯಕವಾಗಿದೆ. ಈ ನಿಟ್ಟಿನಲ್ಲಿ ಯೋಗ, ಪ್ರಾಣಾಯಾಮ ಮತ್ತು ಆಯುರ್ವೇದವು ಮಹತ್ವದ ಪಾತ್ರವನ್ನು ವಹಿಸಿದೆ. ಈ ವಿಧಾನದ ಸದುಪಯೋಗವನ್ನು ಸಾವಿರಾರು ಜನರು ಪಡೆದುಕೊಂಡಿದ್ದು, ಭಾರತ ಮತ್ತು ವಿದೇಶಗಳಲ್ಲಿ ಜನಪ್ರಿಯಗೊಂಡಿದೆ.
ಹೃದಯವು ರಕ್ತವನ್ನು ದೇಹದೆಲ್ಲೆಡೆ ಪ್ರಸಾರಮಾಡುವ ಕಾರ್ಯಮಾಡುತ್ತದೆ, ರಕ್ತವನ್ನು ಮತ್ತೆ ಹೃದಯಕ್ಕೆ ಸೇರಿಸುವ ಕಾರ್ಯಮಾಡಲು ಕಾಲಿನ ಮೀನಖಂಡಗಳು, ನಮ್ಮ ಉಸಿರಾಟ ಪ್ರಕ್ರಿಯೆ ಮತ್ತು ರಕ್ತನಾಳಗಳಲ್ಲಿ ಮೇಲ್ಮುಖವಾಗಿ,ಏಕಮುಖ ರಕ್ತಸಂಚಾರಕ್ಕೆ ಸಹಕಾರಿಯಾಗುವ ನರಗಳು ಗಳು ಪ್ರಮುಖ ಕಾರ್ಯವಹಿಸುತ್ತವೆ. ಮೀನ ಖಂಡಗಳು ಮತ್ತು ಉಸಿರಾಟ ಪ್ರಕ್ರಿಯೆಗಳು ನಮ್ಮ ಎರಡನೇ ಹೃದಯದಂತೆ ಕಾರ್ಯನಿರ್ವಹಿಸುತ್ತವೆ. ಇವುಗಳ ಕಾರ್ಯದಲ್ಲಿ ಉಂಟಾಗುವ ಅಪೂರ್ಣತೆ ಅಥವಾ ಅಶಕ್ತತೆಯಿಂದ ವೆರಿಕೋಸ್ ವೈನ್ಸ್ ಸಂಭವಿಸುತ್ತದೆ.
ವೆರಿಕೋಸ್ ವೈನ್ಸ್ ಗೆ ಕಾರಣಗಳು:
1.ನೈಸರ್ಗಿಕ ಕಾರಣಗಳು :
• ಸ್ವಾಭಾವಿಕವಾಗಿ ರಕ್ತನಾಳಗಳಲ್ಲಿ ಕಡಿಮೆ ಇರುವ ರಕ್ತದೊತ್ತಡ
• ರಕ್ತ ಪರಿಚಲನೆಯಲ್ಲಾಗುವ ಏರಿಳಿತ
o ಹೆಚ್ಚು ರಕ್ತವನ್ನು ಹಿಡಿದಿಟ್ಟುಕೊಳ್ಳಲು ಹಿಗ್ಗುವ ರಕ್ತನಾಳಗಳ ಸ್ವಾಭಾವಿಕ ಸ್ವಭಾವ
o ಮುಪ್ಪಿನ ಕಾರಣ ರಕ್ತನಾಳಗಳ ಹಿಗ್ಗುವಿಕೆ ಕುಗ್ಗುವಿಕೆ
o ರಕ್ತನಾಳಗಳಿಗೆ ಗುರುತ್ವಾಕರ್ಷಣೆಯ ಒತ್ತಡ
2.ಜೀವನಶೈಲಿ ಮತ್ತು ಆನಾರೋಗ್ಯದ ಕಾರಣಗಳು:
• ಹೆಚ್ಚಾದ ದೇಹತೂಕ
• ಒಂದು ಅಥವಾ ಹೆಚ್ಚು ಪ್ರಸವ
• ಮಲಬದ್ಧತೆ
• ಅನಿಯಮಿತ ವ್ಯಾಯಾಮ
• ಹೆಚ್ಚು ಸಮಯ ನಿಂತು ಕೆಲಸಮಾಡುವುದು
• ಹೆಚ್ಚು ಸಮಯ ಕುಳಿತು ಕೆಲಸ ಮಾಡುವುದು.
• ಧೂಮಪಾನ ಮತ್ತು ಮದ್ಯಪಾನ
• ಕೌಟುಂಬಿಕ ಹಿನ್ನೆಲೆ
3.ಲಕ್ಷಣಗಳು:
• ಕಾಲುಗಳಲ್ಲಿಅಥವಾ ಮೀನ ಖಂಡಗಳಲ್ಲಿ ಸೆಳೆತ ಬರುವುದು
• ಕಾಲುಗಳ ಜೋಮು ಹಿಡಿಯುವಿಕೆ
• ಕಾಲುಗಳು ಅಥವಾ ಪಾದ ಊದಿಕೊಳ್ಳುವುದು
• ಕಾಲಿನ ನರ ಉಬ್ಬಿರುವುದು ಕೆಂಪು ನೀಲಿ ಬಣ್ಣ ಅಥವಾ ಸ್ವಲ್ಪ ಹಸಿರು ಬಣ್ಣಕ್ಕೆ ತಿರುಗುವುದು
• ಕಾಲಿನ ಚರ್ಮಕಪ್ಪಾಗುವಿ ಕೆಮತ್ತು ತುರಿಕೆ
• ಕಾಲುಗಳಲ್ಲಿ ಗುಣವಾಗದ ಗಾಯ ಮತ್ತು ನೋವು
4.ವೆರಿಕೋಸ್ ವೈನ್ಸ್ ತಡೆಗಟ್ಟಲು ಪರಿಹಾರೋಪಾಯಗಳು :
• ಕುಳಿತಾಗ ಅಥವಾ ಮಲಗಿದ್ದಾಗ ಕಾಲನ್ನು ಸ್ವಲ್ಪ ಎತ್ತರದಲ್ಲಿಡುವುದು
• ದಿನಕೊಮ್ಮ 30 ನಿಮಿಷ ಎಣ್ಣೆ ಹಚ್ಚಿ ಮೇಲ್ಮುಖವಾಗಿ ಮಸಾಜ್ ಮಾಡುವುದು
• ಆಗಾಗ ಕಾಲುಗಳಿಗೆ ವಿಶ್ರಾಂತಿ ನೀಡುವುದು. ಕುಳಿತುಕೊಳ್ಳುವುದು, ನಿಂತಿಕೊಳ್ಳುವುದು ಮತ್ತು ನಡೆಯುವುದು
• ಪ್ರಯಾಣದ ಸಂದರ್ಭದಲ್ಲಿ ಬಿಗಿಯಾದ ಕಾಲುಚೀಲ ಧರಿಸುವುದು
• ನಿತ್ಯದ ದಿನಚರಿಯಲ್ಲಿ ವ್ಯಾಯಾಮ ಮತ್ತು ಪ್ರಾಣಾಯಾಮಕ್ಕೆ ಆದ್ಯತೆ ನೀಡುವುದು
• ದೇಹತೂಕಹೆಚ್ಚಾಗದಂತೆನೋಡಿಕೊಳ್ಳುವುದು.
5. ಚಿಕಿತ್ಸೆ:
ವೆರಿಕೋಸ್ ವೈನ್ಸ್ ನಿಂದ ಉಂಟಾಗುವ ಗಾಯವನ್ನು ನಿವಾರಿಸಲು ಹಲವು ವೈದ್ಯ ಪದ್ಧತಿಗಳು ವಿಫಲವಾಗಿವೆ. ಆದರೆ ‘ಉರಾಳ್ ವೆರಿಕೋಸ್ ವೈನ್ಸ್ ಆಯುರ್ವೇದಿಕ್ ಕೇರ್’ ನಲ್ಲಿ ನೀಡುತ್ತಿರುವ ಚಿಕಿತ್ಸೆ ಸಂಪೂರ್ಣ ಪರಿಣಾಮಕಾರಿ ಎನಿಸಿದೆಯಾದರೂ ಯೋಗ ಮತ್ತು ಪ್ರಾಣಾಯಾಮಗಳಿಲ್ಲದೆ ಇದು ಉತ್ತಮ ಫಲ ನೀಡಲಾರದು. ಯೋಗಾಸನಗಳಾದ ತಾಡಾಸನ, ಪ್ರಸಾರಿತ ಪಾದೋತ್ತಾನಾಸನ, ತ್ರಿಕೋನಾಸನ, ಸರ್ವಾಂಗಾಸನ, ಪಶ್ಚಿಮೋತ್ತಾಸನ, ಹಲಾಸನ, ಮತ್ಸ್ಯಾಸನ, ಭುಜಂಗಾಸನ, ಶಲಭಾಸನ, ಧನುರಾಸನ ಮತ್ತು ಅನುಲೋಮ ವಿಲೋಮ ಪ್ರಾಣಾಯಾಮ, ಕಪಾಲ ಭಾತಿಗಳು ಮೀನಖಂಡಗಳ ಮತ್ತು ಉಸಿರಾಟ ಪ್ರಕ್ರಿಯೆಗಳ ಕಾರ್ಯದಲ್ಲಿ ಉಂಟಾಗಿದ್ದ ಅಪೂರ್ಣತೆ ಅಥವಾ ಅಶಕ್ತತೆಯನ್ನು 40% ಸರಿಪಡಿಸುವಲ್ಲಿ ಸಹಕಾರಿಯಾಗಿದೆ ಹಾಗೂ ಈ ಕಾರ್ಯವು ಯಾವುದೇ ಔಷಧಿಯಿಂದ ಸಾಧ್ಯವಿಲ್ಲ. ಮಿಕ್ಕ 60% ಆನಾರೋಗ್ಯದ ಕಾರ್ಯ ಸರಿಪಡಿಸುವಲ್ಲಿ ಸಾಕಷ್ಟು ಸಂಶೋಧನೆ ಮಾಡಿ ಆವಿಷ್ಕರಿಸಿದ ಡಾ. ಉರಾಳರ ಔಷಧಿ ಯಶಸ್ವಿಯಾಗಿದೆ.
ವೆರಿಕೋಸ್ ವೈನ್ಸ್ ಮುಕ್ತ ಸಮಾಜದ ಕನಸುಗಾರ ಡಾ ಎಂ.ವಿ.ಉರಾಳ್
ತಿಂಗಳುಗಟ್ಟಲೆ ವೆರಿಕೋಸ್ ವೈನ್ಸ್ ನಿಂದ ನರಳುತ್ತಿದ್ದು ಚಿಕಿತ್ಸೆಗಾಗಿ ತನ್ನ ಆಸ್ಪತ್ರೆಗೆ ದಾಖಲಾದ ಸಂಬಂಧಿಯ ನೋವನ್ನು ಕಣ್ಣಾರೆ ಕಂಡು, ಹಾಗೂ ಅದೇ ಆಸ್ಪತ್ರೆಯಲ್ಲಿ ನೋವಿನಿಂದ ತಿಂಗಳುಗಟ್ಟಲೆ ನರಳುತ್ತಿದ್ದವರನ್ನು ನೋಡಿರುವ ಉರಾಳ್ ರವರು ಸತತ ಪರಿಶ್ರಮದಿಂದ ಇದಕ್ಕೊಂದು ಉತ್ತಮ ಪರಿಣಾಮಕಾರಿಯಾದಂತಹ ಆಯುರ್ವೇದ ಔಷಧಿಯನ್ನು ಆವಿಷ್ಕಾರ ಮಾಡಿರುವರು.
ಕರ್ನಾಟಕದ ಕರಾವಳಿ ಜಿಲ್ಲೆ ಉಡುಪಿಯ ಮಣೂರು, ರಾಧಾಕೃಷ್ಣ ಉರಾಳ್ ಹಾಗೂ ಮಹಾಲಕ್ಷ್ಮಿಯವರ ಪುತ್ರ ಡಾ.ಎಂ.ವಿ. ಉರಾಳ್ ಅವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಎ.ಎಲ್.ಎನ್ ರಾವ್ ಸ್ಮಾರಕ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಬಿ.ಎ.ಎಂ.ಎಸ್ ಪದವಿ ಪಡೆದರು. ಕಲಿಕೆಯಲ್ಲಿ ಯಾವಾಗಲೂ ಉತ್ಸುಕರಾಗಿರುವ ಇವರು ಆವಿಷ್ಕಾರಿ ಮನೋಭಾವದವರು. ಅವರ ಉತ್ಸಾಹವು ದೀರ್ಘಕಾಲದ ಕಾಯಿಲೆಗಳನ್ನು ನಿರ್ವಹಿಸುವಲ್ಲಿ, ಕೈಗೆಟುಕುವ ವೆಚ್ಚದಲ್ಲಿ ಸರಳ ಸೂತ್ರೀಕರಣಗಳನ್ನು ಬಳಸಿಕೊಂಡು ಅತ್ಯುತ್ತಮವಾದ ಪರಿಹಾರಗಳನ್ನು ನೀಡುವಲ್ಲಿ ಸಫಲವಾಗಿವೆ.
ವೆರಿಕೋಸ್ ವೈನ್ಸ್ ಮುಕ್ತ ಸಮಾಜಕ್ಕಾಗಿ ಅವರ ಸಂಸ್ಥೆಯ ಮೂಲಕ ಪವರ್ ಪಾಯಿಂಟ್ ಪ್ರಸ್ತುತಿಗಳು, ಕಿರು ವೀಡಿಯೊಗಳು ಮತ್ತು ಇತರ ಶೈಕ್ಷಣಿಕ ಸಾಮಗ್ರಿಗಳ ಮೂಲಕ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಶಿಕ್ಷಣ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪನಿಗಳು, ಪೊಲೀಸ್ ಇಲಾಖೆಗಳ ನೆರವಿನಿಂದ ಮಾಡುತ್ತಿದ್ದಾರೆ. ಬೇಡಿಕೆ ಹೆಚ್ಚಾದಂತೆ, ಹೆಚ್ಚು ಸಮರ್ಥ ಕೈಗಳ ಅಗತ್ಯವಿದೆ ಎನ್ನುವುದನ್ನು ಮನಗಂಡು, ಈ ಅಗತ್ಯವನ್ನು ಪೂರೈಸಲು ವೈದ್ಯರಿಗೆ ತರಬೇತಿ ಕೌಶಲ್ಯಗಳನ್ನು ಡಾ. ಎಂ. ವಿ. ಉರಾಳ್ ನೀಡುತ್ತಿದ್ದಾರೆ. ಇದು ವೆರಿಕೋಸ್ ವೈನ್ಸ್ ಮುಕ್ತ ಸಮಾಜದ ಅಭಿಯಾನದ ವ್ಯಾಪ್ತಿಯನ್ನು ರಾಜ್ಯದ ಗಡಿಯಾದ್ಯಂತ ಮತ್ತು ಆಚೆಗೂ ವಿಸ್ತರಿಸಿದೆ.
ಡಾ.ಎಂ.ವಿ. ಉರಾಳ್ ರವರು ಜ್ಞಾನ, ಕಲಿಕೆಗೆ ಹೆಸರುವಾಸಿಯಾದ ಪುಣ್ಯಭೂಮಿ ಶಾರದೆಯ ವಾಸಸ್ಥಾನ ಶೃಂಗೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಕರ್ನಾಟಕದಲ್ಲಿ 13 ಶಾಖೆಗಳನ್ನು (ಮೈಸೂರು, ಬೆಂಗಳೂರು, ಮಂಗಳೂರು, ಬಳ್ಳಾರಿ, ಶಿವಮೊಗ್ಗ, ಸಾಗರ, ನಗರ, ರಾಯಚೂರು, ಹಾಸನ, ಕುಶಾಲನಗರ, ಕೋಲಾರ, ಗೊಕಾಕ್ ಮತ್ತು ಬೀದರ್), ತೆಲಂಗಾಣದಲ್ಲಿ 2 (ಹೈದರಾಬಾದ್ ಮತ್ತು ನಾರಾಯಣಪೇಟೆ) ಮತ್ತು ಮಹಾರಾಷ್ಟ್ರದಲ್ಲಿ 1 (ಪುಣೆ) ಹಾಗೂ ಕೇರಳದ ಏರ್ನಾಕುಲಂನಲ್ಲೂ ಸ್ಥಾಪಿಸಿದ್ದಾರೆ.
ಡಾ.ಎಂ.ವಿ. ಉರಾಳ್ ರವರು ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ಸಂಜೆಪ್ರಭ ಪತ್ರಿಕೆಯ “ದಶಮ ಸಂಭ್ರಮ'” ಸಮಾರಂಭದಲ್ಲಿ “ಸಂಜೆಪ್ರಭ ಸಾಮಾಜಿಕ ಸೇವಾರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ವೆಬ್ ಸೈಟ್: www.uralsayurveda.in ಹೆಚ್ಚಿನ ವಿವರಗಳಿಗಾಗಿ ಹಾಗೂ ವೈದ್ಯರ ಸಂದರ್ಶನಕ್ಕಾಗಿ 9448914646 ಗೆಕರೆಮಾಡಿ.