ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯ ಡಾ. ಬ್ರಯಾಲ್ ಡಿಸೋಜಾ ಅವರಿಗೆ ಪಿಎಚ್.ಡಿ ಪದವಿ

ಮಣಿಪಾಲ: ಡಾ. ಬ್ರಯಾಲ್ ಡಿಸೋಜಾ ಸಹಾಯಕ ಪ್ರಾಧ್ಯಾಪಕರು, ಸಾರ್ವಜನಿಕ ಆರೋಗ್ಯ ವಿಭಾಗ, ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ (ಪಿ ಎಸ್ ಪಿ ಎಚ್) ಮತ್ತು ಗುಣಮಟ್ಟ ನಿರ್ವಹಣೆಯ ಪ್ರತಿನಿಧಿ (ಕ್ವಾಲಿಟಿ ಮ್ಯಾನೇಜ್ ಮೆಂಟ್ ರೆಪ್ರೆಸೆಂಟೇಟಿವ್) ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರು ತಮ್ಮ ರೋಗಿಗಳ ಫಲಿತಾಂಶದ ಮೇಲೆ ಮಾಡ್ಯುಲರ್ ಶೈಕ್ಷಣಿಕ ಹಸ್ತಕ್ಷೇಪದ ಪರಿಣಾಮಕಾರಿತ್ವದ ‘ಮೆಂಟೆನೆನ್ಸ್ ಹಿಮೋಡಯಾಲಿಸಿಸ್ ಪೇಷಂಟ್ಸ್ ಆಫ್ ಕೋಸ್ಟಲ್ ಕರ್ನಾಟಕ – ಎ ರಾಂಡೋಮೈಸ್ಡ್ ಕಂಟ್ರೋಲ್ ಟ್ರಯಲ್’ ವಿಷಯದ ಕುರಿತು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮೂಲಕ ಸಲ್ಲಿಸಿದ್ದ ತಮ್ಮ ಪ್ರಬಂಧಕ್ಕಾಗಿ ಪಿಎಚ್‌ಡಿಯನ್ನು ಪಡೆದಿದ್ದಾರೆ.

ಡಾ. ಬ್ರಯಾಲ್ ಡಿಸೋಜಾ, ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ. ಬಿ .ಉನ್ನಿಕೃಷ್ಣನ್ ಮತ್ತು ಡಾ. ರವೀಂದ್ರ ಪ್ರಭು, ಪ್ರೊಫೆಸರ್ ಮತ್ತು ಯುನಿಟ್ ಹೆಡ್ ಆಫ್ ನೆಫ್ರಾಲಜಿ ಕೆಎಂಸಿ ಮಣಿಪಾಲ ಇವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.