ಮಾಯಾ ಕಾಮತ್ ನೇತೃತ್ವದಲ್ಲಿ ಮನೆ ಮನೆ ಭಜನೆ ಕಾರ್ಯಕ್ರಮ

ಮಣಿಪಾಲ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಯಾ ಕಾಮತ್ ನೇತೃತ್ವದಲ್ಲಿ ಮನೆ ಮನೆ ಭಜನೆ ಕಾರ್ಯಕ್ರಮವು ಆದಿತ್ಯವಾರದಂದು ನಗರದ ಮಾತೃಶ್ರೀ ನಿಲಯದ ಸುಜಾತಾ ಗಣೇಶ್ ಇವರ ಮನೆಯಲ್ಲಿ ಜರಗಿತು.

ಶಾಸಕ ಯಶಪಾಲ್ ಸುವರ್ಣ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಸಿ ಈ ಹಿಂದೆ ಎಲ್ಲಾ ಮನೆಗಳಲ್ಲಿ ಭಜನೆ ನಡೆಯುತಿತ್ತು. ಈಗಿನ ಯುವ ಜನಾಂಗಕ್ಕೆ ಭಜನೆ ತರಬೇತಿ ನೀಡಿ ನಮ್ಮ ಸನಾತನ ಧರ್ಮ ಉಳಿಸಿ ಬೆಳೆಸಲು ಸುಲಭ ಮಾರ್ಗವಾಗಿದ್ದು ನಿತ್ಯ ನಿರತಂತರ ಪ್ರತಿ ಮನೆಯಲ್ಲಿ ಭಜನೆ ನಡೆಯಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಪೊಲೀಸ್ ಇನ್ಸ್ಪೆಕ್ಟರ್ ಕೋಸ್ಟಲ್ ಸೆಕ್ಯೂರಿಟಿ ಪ್ರಮೋದ್ ಕುಮಾರ್, ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಶೆಟ್ಟಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಹಾಗೂ ಸಮಾಜ ಸೇವಕ ಶೈಲೆಂದ್ರ ಶೆಟ್ಟಿ, SASS ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ತಾರಾ. ಯು. ಆಚಾರ್ಯ, ಉಡುಪಿ ಜಿ. ಸ್. ಬಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಧಾ ಶೆಣೈ
ಮಹಾ ಮಾಯಾ ಭಜನಾ ಮಂಡಳಿಯ ಮೋಹಿನಿ ಭಟ್, ವಿದ್ಯಾ ಶರ್ಮಾ ಕಟಪಾಡಿ, ಪ್ರಭಾರಾವ್ ಕಲ್ಯಾಣಪುರ,ವಿದ್ಯಾ. ಎಸ್ ನಾಯಕ್, ಸುಜಾತಾ ಪೂಜಾರಿ, ರೇವತಿ ರಾಜೀವನಗರ, ಎನ್. ನಾಗರಾಜ ಕುಮಾರಿ,ಸುಜಾತಾ ಪೂಜಾರಿ, ಸುಮಿತ್ರಾ ಪೂಜಾರಿ ಪ್ರಗತಿ ನಗರ, ಗೀತಾ ಸಂಜೀವ, ಗೀತಾ ಮಿಥುನ ಪೂಜಾರಿ, ಪ್ರಭಾವತಿ ಸದಾಶಿವ, ಸುಧಾರಾಣಿ ಮುನಿಯಪ್ಪ, ಪ್ರಭಾ ಹಾಜರಿದ್ದರು.

ರಾಜ್ಯಶ್ರೀ ಸುಧಾರಾಮ್ ಶೆಟ್ಟಿ ಪ್ರಾರ್ಥಿಸಿದರು. ಸವಿತಾ ಶೆಟ್ಟಿ ನಿರೂಪಿಸಿದರು.