ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯೋ ಅಭ್ಯಾಸ ನಿಮಗಿದ್ರೆ ಕೂಡಲೇ ಬಿಡೋದು ಒಳ್ಳೇದು : ಇದು ಉಡುಪಿXPRESS ಕಾಳಜಿ

ಬರಹ-ಸುವರ್ಚಲಾ ಬಿ.ಸಂ

ಸಾಮಾನ್ಯವಾಗಿ ನಾವು ಹೊರಗೆ ಹೋಗುವ ಸಂದರ್ಭ ಬಂದಾಗ ಎತ್ತಿಕೊಂಡು ಹೋಗಲು ಹಗುರವೆಂದೋ, ಕಳೆದುಹೋದರೂ ನಷ್ಟವಿಲ್ಲ ಎಂದೋ ಪ್ನಾಸ್ಟಿಕ್ ಬಾಟಲಿಯಲ್ಲಿ ಸಾಮಾನ್ಯವಾಗಿ ನೀರು ತೆಗೆದುಕೊಂಡು ಹೋಗುತ್ತೇವೆ. ಅಲ್ಲದೇ ಅಂಗಡಿಗಳಲ್ಲಿ ಸಿಗುವ ನೀರಿನ ಶೇಖರಿಸಿಟ್ಟ ನೀರಿನ ಬಾಟಲಿಗಳನ್ನು ಖರೀದಿಸುತ್ತೇವೆ.
ಈ ರೀತಿಯ ಅಭ್ಯಾಸವಿದ್ದರೆ ಖಂಡಿತಾ ಬಿಟ್ಟುಬಿಡಿ. ಅನುಕೂಲಕ್ಕಿಂತ ನಮ್ಮ ಆರೋಗ್ಯ ನಮಗೆ ಅತಿಮುಖ್ಯ.

ನೀರಿನ ವಿಷಯದಲ್ಲಿ ಹೀಗೆ ಮಾಡಿ
ಸ್ಟೀಲ್ ನೀರಿನ ಬಾಟಲಿಗಳು ಪ್ಲಾಸ್ಟಿಕ್ ಬಾಟಲಿಗಿಂತ ತುಸು ದುಬಾರಿ ಎನಿಸಿದರೂ ನಮ್ಮ ಆರೋಗ್ಯ ಮುಖ್ಯ. ಹಾಗಾಗಿ ಕಡಿಮೆ ತೂಕ ಇರುವ ಸ್ಟೀಲ್ ಬಾಟಲಿಯನ್ನು ಕೊಂಡುಕೊಳ್ಳಿ. ಸದಾ ಹೊರಗೆ ಹೋಗುವಾಗ ನಿಮ್ಮ ಬಾಟಲಿಯಲ್ಲಿ ನಿಮ್ಮ ಮನೆಯ ಶುದ್ಧ ನೀರನ್ನೇ ತೆಗೆದುಕೊಂಡುಹೋಗಿ.

ಮದುವೆ ಮುಂತಾದ ಶುಭಸಮಾರಂಭಗಳಿಗೆ ಹೋಗುವಾಗಲೂ ಅಲ್ಲಿ ಕೊಡುವ ಪ್ಲಾಸ್ಟಿಕ್ ಬಾಟಲಿಯನ್ನು ನಿರಾಕರಿಸಿ ನಿಮ್ಮದೇ ಬಾಟಲಿಯ ನೀರು ಕುಡಿಯಿರಿ. ಇದರಿಂದ ಪರಿಸರಕ್ಕೆ ನಮ್ಮ ಕೈಲಾದ ಅಲ್ಪ ಕೊಡುಗೆಯನ್ನು ಕೊಡಬಹುದು.

ಆಹಾರವಿಲ್ಲದೇ ಒಂದೆರಡು ದಿನ ಹೇಗಾದರೂ ಬದುಕಬಹುದೇನೋ. ಆದರೆ ನೀರಿಲ್ಲದೆ ಬದುಕಲು ತುಂಬಾ ಕಷ್ಟ. ಇಂತಹ ಅತ್ಯಗತ್ಯ ನೀರು ಪ್ಲಾಸ್ಟಿಕ್ ಬಾಟಲಿಯಲ್ಲಿ, ಲೋಟಗಳಲ್ಲಿ ಕುಡಿಯುವ ಮೊದಲು ಯೋಚ್ನೆ ಮಾಡಿ. ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಸ್ಟೀಲ್ ಬಾಟಲಿಯನ್ನು ಜೊತೆಗೊಯ್ಯಿರಿ ಈ ಬಾಟಲಿ ಒಳ್ಳೆ ಬಾಳಿಕೆಯೂ ಬರುತ್ತದೆ. ಒಂದು ಪರಿಸರ ಸ್ನೇಹಿ ಅಭ್ಯಾಸವೂ ನಮ್ಮದಾಗುತ್ತದೆ. ಇದು ನಮ್ಮ ಕಾಳಜಿ