ಮಾರುಕಟ್ಟೆಯಲ್ಲಿ ನೂರಾರು ವಿದೇಶಿ ಹಣ್ಣು ಈಗೀಗ ಲಗ್ಗೆ ಇಡುತ್ತಿದೆ. ಆದರೆ ನಾವು ನಮ್ಮ ಊರಿನಲ್ಲಿ ಬೆಳೆಯುವ, ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿರುವ ಕೆಲವು ಹಣ್ಣುಗಳನ್ನೇ ಮರೆತುಬಿಡುತ್ತಿದ್ದೇವೆ. ಅವುಗಳಲ್ಲಿ ಸ್ಟಾರ್ ಫ್ರೂಟ್ (ಧಾರೆಹುಳಿ) ಹಣ್ಣು ಕೂಡ ಒಂದು. ಈ ಹಣ್ಣು ನಮ್ಮಲ್ಲಿ ಹೊಸ ಶಕ್ತಿ ಚೈತನ್ಯವನ್ನು ತುಂಬಿಸುವಷ್ಟು ಪವರ್ ಫುಲ್. ಇದು ಹುಳಿಮಿಶ್ರಿತ ಸಿಹಿ ಹಣ್ಣಾಗಿದ್ದು, ಅನೇಕ ಪೋಷಕಾಂಶಗಳ ಆಗರ ಈ ಹಣ್ಣು. ಬಾಲಿವುಡ್‌ನ ಅತ್ಯಂತ ಫಿಟೆಸ್ಟ್ ದಿವಾ ಶಿಲ್ಪಾ ಶೆಟ್ಟಿ ಕೂಡ ಇದರ ಪೌಷ್ಟಿಕಾಂಶದ ಶಕ್ತಿಯನ್ನು ಶ್ಲಾಘಿಸುತ್ತಾರೆ. ಈ ಹಣ್ಣನ್ನು ಬಳಸುತ್ತಾರೆ.

ಏನು ಪ್ರಯೋಜನ:
ಸ್ಟಾರ್ ಹಣ್ಣುಗಳಲ್ಲಿ ಕಂಡುಬರುವ ವಿಟಮಿನ್ ಸಿ ಮತ್ತು ಫ್ಲೇವನಾಯ್ಡ್‌ಗಳು ಹೃದಯದ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಗೆ ಈ ಹಣ್ಣು ಅತ್ಯಂತ ಬೆಸ್ಟ್ ಹಣ್ಣು, ಜೀರ್ಣ ಕ್ರೀಯೆಯಲ್ಲಿ ನಿಮಗೆ ಸಮಸ್ಯೆ ಇದ್ರೆ ಬೇರೇನೂ ಬೇಕಾಗಿಲ್ಲ ದಿನಕ್ಕೆ ಒಂದೆರಡು ಹಣ್ಣನ್ನು ತಿಂದರೆ ಸಾಕು.
ಕ್ಯಾನ್ಸರ್ ಅನ್ನು ತಡೆಹಿಡಿಯುವ ಶಕ್ತಿ ಕೂಡ ಈ ಹಣ್ಣಿಗಿದೆಯಂತೆ.
ವಿಟಮಿನ್ ಸಿ ಜೀವಕೋಶದ ಹಾನಿಯನ್ನು ತಡೆಯಬಹುದು ಮತ್ತು ಬಲವಾದ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ.
ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಇದ್ದು, ಇದು ನಿಮ್ಮ ಚರ್ಮಕ್ಕೂ ಒಳ್ಳೆಯದು. ವಿಟಮಿನ್ ಸಿ ಕಾಲಜನ್ ರಚನೆಗೆ ಕೊಡುಗೆ ನೀಡುವುದರಿಂದ, ಕೆಲವು ತಜ್ಞರು ಇದು ಚರ್ಮದ ಮೃದುತ್ವ, ನಯವಾದ ನೋಟವನ್ನು ಕಾಪಾಡಿಕೊಳ್ಳಲು ಈ ಹಣ್ಣು ಸಹಾಯ ಮಾಡುತ್ತೆ. ಇನ್ನುಳಿದಂತೆ ಕೆಮ್ಮು, ಕಫ, ಶೀತವನ್ನು ಈ ಹಣ್ಣಿನಷ್ಟು ಬೇರ್ಯಾವ ಹಣ್ಣು ನಿಯಂತ್ರಿಸುದಿಲ್ಲವಂತೆ. ಈ ಹಣ್ಣಿನ ಜ್ಯೂಸ್ ಮಾಡಿ ಕುಡಿದರೆ ಶೀತ ಕೆಮ್ಮು ಎಲ್ಲವೂ ಕೆಲವೇ ಗಂಟೆಗಳಲ್ಲಿ ನಿವಾರಣೆಯಾಗುತ್ತದೆ. ಯಾವ ಸಮಸ್ಯೆ ಇಲ್ಲದೆಯೂ ಈ ಹಣ್ಣು ತಿಂದರೆ ಪ್ರೋಟೀನ್ ತುಂಬುತ್ತದೆ.
ಆರೋಗ್ಯದ ಆಗರವಾಗಿರುವ ಈ ಹಣ್ಣು ಎಲ್ಲಾದ್ರೂ ಸಿಕ್ಕರೆ ಮಿಸ್ ಮಾಡದೇ ತಿನ್ನಿರಿ.












