ಪ್ಯಾಂಟ್ ಹಿಂದಿನ ಜೇಬಿನಲ್ಲಿ ಪರ್ಸ್ ಇಡ್ತೀರಾ?, ಇಟ್ರೆ ಏನ್ ಪ್ಲಾಬ್ಲಂ ಅಂತೀರಾ? ಈ ಫೋಸ್ಟ್ ಓದಿ!

ಪರ್ಸ್ ಇಟ್ರೆ ಏನಾಗುತ್ತೆ :ಸಂಶೋದಕರು ಹೇಳಿದ್ದೇನು?

ಹಿಂದಿನ ಜೇಬಿನಲ್ಲಿ ಪರ್ಸ್ ಇಟ್ಟುಕೊಳ್ಳೋದರಿಂದ  ಹೆಚ್ಚಿನ ಸಂಖ್ಯೆಯ ಜನರು ಹಿಂಬದಿ ನೋವನ್ನು ಅನುಭವಿಸುತ್ತಿದ್ದಾರಂತೆ. ಹಿಂಬದಿಯ ಸ್ನಾಯುಗಳಲ್ಲಿ ನೋವು ಕಾಣಿಸಿಕೊಂಡು ಬೆನ್ನು ತೊಡೆಗೂ ಉಳುಕು ಶುರುವಾಗುತ್ತದಂತೆ. ಸೊಂಟದ ನರಗಳಿಗೂ ಇದರಿಂದ ಸಮಸ್ಯೆಯಂತೆ.

ಇನ್ನೊಂದು ಗಮನಿಸಬೇಕಾದ ಸಂಗತಿಯನ್ನು ಸಂಶೋದಕರು ಬಯಲಿಗೆಳೆದಿದ್ದಾರೆ. ಅದೇನೆಂದರೆ ಹಿಂದಿನ ಜೇಬಿನಲ್ಲಿರಿಸಿದ ಶೇ.80 ರಷ್ಟು ಜನರ ಪರ್ಸ್, ಪಿಕ್ ಪಾಕೆಟ್ ಆಗಿದೆಯಂತೆ. ಬಹುತೇಕ ಎಲ್ಲಾ ದೇಶಗಳಲ್ಲಿಯೂ ಈ ಸಮಸ್ಯೆ ಇದೆ ಎಂದು ಸಂಶೋದಕರು ದಾಖಲಿಸಿದ್ದಾರೆ.

ಅಂದ ಹಾಗೆ ಪರ್ಸ್ ಗಳಲ್ಲಿ ಹಣ, ನಾಣ್ಯದ ಜೊತೆ ಜೊತೆ ಹಲವು ತರಹದ ಕಾರ್ಡ್ ಗಳನ್ನು ಇರಿಸುವದರಿಂದ ಪರ್ಸ್ ಭಾರ ಜಾಸ್ತಿಯಾಗುತ್ತದೆ.  ತುಂಬಾ ಮಂದಿ ಬಸ್ ನಲ್ಲಿ, ಸಾರ್ವಜನಿಕ ಸ್ಥಳದಲ್ಲಿ, ಆಫೀಸಿನಲ್ಲಿ ಕೂರುವಾಗ  ಹಾಗೇ ಕುಳಿತುಕೊಳ್ಳುತ್ತಾರೆ, ಇದರಿಂದ ಸೊಂಟಕ್ಕೂ ಒತ್ತಡ ಬೀಳುತ್ತದೆ. ಇದರ ಬದಲು ಹಗುರವಾದ ವಸ್ತುಗಳನ್ನು ಹಿಂದಿನ ಜೇಬಿನಲ್ಲಿ ಇಟ್ಟುಕೊಳ್ಳುವ ಅಭ್ಯಾಸ ಶುರು ಮಾಡಬೇಕು, ಬಲ ಮತ್ತು ಎಡ ಬದಿಯ ಜೇಬಿನಲ್ಲಿ ಸರಿ ಸಮನಾಗಿ ಹಗುರವಾದ ವಸ್ತುಗಳನ್ನು ಇರಿಸಿಕೊಳ್ಳಬೇಕಂತೆ

ನೀವೂ ಹಿಂದಿನ ಜೇಬಿನಲ್ಲಿ ಪರ್ಸ್ ಇಟ್ಟುಕೊಂಡು ಪರ್ಸ್ ಕಳೆದುಕೊಂಡವರಾದರೆ ಮತ್ತೆ ಆ ತಪ್ಪು ಮಾಡಬೇಡಿ. ಆರೋಗ್ಯದ ಮತ್ತು ಜಾಗರೂಕತೆಯ ದೃಷ್ಟಿಯಿಂದಲೂ ಹಿಂದಿನ ಜೇಬಿನಲ್ಲಿ ಪರ್ಸ್ ಇಟ್ಟುಕೊಳ್ಳುವ ಅಭ್ಯಾಸ ಕಡಿಮೆ ಮಾಡಿರಿ.