ಆಲೂಗಡ್ಡೆಯನ್ನು ಫ್ರಿಡ್ಜ್ನಲ್ಲಿ ಇಡುವುದು ಬಹುತೇಕ ಮಂದಿಗಳ ಅಭ್ಯಾಸ.ಆದರೆ ನೆನಪಿಡಿ ಆಲೂಗಡ್ಡೆಯನ್ನು ಫ್ರಿಡ್ಜ್ನಲ್ಲಿ ಇಡಬಾರದು. ಫ್ರಿಡ್ಜ್ನಲ್ಲಿ ಇಟ್ಟರೆ ಅದರಲ್ಲಿರುವ ಪಿಷ್ಠ, ಸಕ್ಕರೆಯಾಗಿ ಬದಲಾಗುತ್ತದೆ. ಅದನ್ನು ಸೇವಿಸಿದರೆ ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಎನ್ನುವುದು ತಜ್ಞರ ಅಭಿಮತ.
ಹೌದು ಆಲೂಗಡ್ಡೆಯನ್ನು ಬಳಸುವುದಕ್ಕೆ ಕೆಲವೊಂದು ಕ್ರಮಗಳಿವೆ.ಅದ್ಯಾವುದು ಅಂತ ಹೇಳ್ತೆವೆ ಕೇಳಿ. ಆಲೂಗಡ್ಡೆಯನ್ನು ದೀರ್ಘ ಸಮಯದವರೆಗೆ ಹಾಳಾಗದಂತೆ ಇಡಲು ತುಂಬಾ ಜನರು ನಾನಾ ರೀತಿ ಪ್ರಯತ್ನಿಸುತ್ತಾರೆ. ಆದರೆ ಕೆಲವರು ಏನೇ ಮಾಡಿದರೂ ಬೇಗನೆ ಆಲೂಗಡ್ಡೆ ಹಾಳಾಗುತ್ತದೆ. ನೆನಪಿಡಿ ಆಲೂಗಡ್ಡೆಯನ್ನು ತೇವಾಂಶ ಇರುವ ಕಡೆ ಇಡಬಾರದು. ಚೆನ್ನಾಗಿ ಗಾಳಿಯಾಡುವ ಒಣ ಪ್ರದೇಶದಲ್ಲಿ ಇಡಬೇಕು. ಪ್ಲಾಸ್ಟಿಕ್ ಕವರ್ನಲ್ಲಿ ಮುಚ್ಚಿಡಬಾರದು.
ಮನೆಯಲ್ಲಿ ಸಂಗ್ರಹಿಸಿಡಲು ತರುವ ಆಲೂಗಡ್ಡೆಯನ್ನು ತೊಳೆದು ಇಡಬೇಡಿ. ಬಳದುವಾಗ ನೀರಿನಿಂದ ತೊಳೆಯುವುದು ಉತ್ತಮ.
ಆಲೂಗಡ್ಡೆಯನ್ನು ಬೇರೆ ತರಕಾರಿಯ ಜೊತೆ ಬೆರೆಸಿಡಬಾರದು. ಮುಖ್ಯವಾಗಿ ಈರುಳ್ಳಿ ಜೊತೆ ಆಲೂಗಡ್ಡೆಯನ್ನು ಬೆರೆಸಿಡಬಾರದು. ಜೊತೆಗೆ ಸ್ವಲ್ಪ ಕತ್ತಲಿರುವ ಕಡೆ ಆಲೂಗಡ್ಡೆಯನ್ನು ಇಡಬಹುದು.
ಮೊದಲು ಹಾಳಾಗಿರುವ ಆಲೂಗಡ್ಡೆಯನ್ನು ಪ್ರತ್ಯೇಕ ಮಾಡಿ, ನಂತರ ಒಣ ಪ್ರದೇಶದಲ್ಲಿ ಗುಂಪಾಗಿ ಒಂದೇ ಕಡೆ ಸುರಿಯುವ ಬದಲು ನೆಲದ ಮೇಲೆ ಹರಡಿ. ಇದರಿಂದ ಆಲೂಗಡ್ಡೆ ಹೆಚ್ಚಿನ ಸಮಯ ಹಾಳಾಗದಂತೆ ಉಳಿಯುತ್ತದೆ.