ನವದೆಹಲಿ: ಸದ್ಯದ ಪರಿಸ್ಥಿತಿಯಲ್ಲಿ ದೇಶವನ್ನು ಲಾಕ್ ಡೌನ್ ನಿಂದ ರಕ್ಷಿಸಬೇಕಾಗಿದೆ. ಲಾಕ್ ಡೌನ್ ಅಸ್ತ್ರವನ್ನು ಅಂತಿಮವಾಗಿ ಮಾತ್ರ ಬಳಸಬೇಕು. ನಾನು ಈ ಬಗ್ಗೆ ಎಲ್ಲ ರಾಜ್ಯಗಳಿಗೂ ಮನವಿ ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ರಾಜ್ಯಗಳು ಲಾಕ್ ಡೌನ್ ಅಸ್ತ್ರವನ್ನು ಅಂತಿಮವಾಗಿ ಬಳಸಬೇಕು. ಮೈಕ್ರೋ ಕಂಟೋನ್ಮೆಂಟ್ ಝೋನ್ ಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಸದ್ಯದ ಪರಿಸ್ಥಿತಿಯನ್ನು ಬದಲಾಯಿಸಲು ಜನರು ಹೋರಾಡಬೇಕು. ಅನಗತ್ಯವಾಗಿ ಜನರು ಮನೆ ಬಿಟ್ಟು ಹೊರಬರಬೇಡಿ. ಲಾಕ್ ಡೌನ್ ಅಸ್ತ್ರ ಪ್ರಯೋಗಿಸಲು ಅವಕಾಶ ಕೊಡಬೇಡಿ ಎಂದು ಮನವಿ ಮಾಡಿದರು.
ಕೋವಿಡ್ ಎರಡನೇ ಅಲೆ ತೂಫನ್ ರೀತಿ ಬಂದಿದೆ. ಕೊರೊನಾ ಮಹಾಮಾರಿ ದೇಶದಲ್ಲಿ ಮತ್ತೊಂದು ಆತಂಕದ ಅಲೆ ಎಬ್ಬಿಸಿದೆ. ಕೊರೊನಾ ವಿರುದ್ಧ ದೇಶ ಮತ್ತೊಂದು ಹೋರಾಟ ನಡೆಸಿದೆ ಎಂದು ಹೇಳಿದರು.
ದೇಶದ ವೈದ್ಯರು, ವೈದ್ಯಕೀಯ, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಪೊಲೀಸರು, ಸಪಾಯಿ ಕರ್ಮಚಾರಿಗಳು ದೇಶದ ಜನರ ಪ್ರಾಣ ರಕ್ಷಿಸಲು ಹಗಳಿರುಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಆಕ್ಸಿಜನ್ ಪೊರೈಕೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ದೇಶದಲ್ಲಿ ವ್ಯಾಕ್ಸಿನ್ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ. ಆಕ್ಸಿಜನ್ ಉತ್ಪಾದನೆ, ಪೊರೈಕೆಗೆ ಹೆಚ್ಚು ಶ್ರಮ ವಹಿಸಲಾಗುತ್ತಿದೆ ಎಂದರು.
ಲಸಿಕೆ ಉತ್ಪಾದನೆಗೆ ಎಲ್ಲ ಫಾರ್ಮಸಿಗಳ ಜತೆ ಚರ್ಚೆ ನಡೆಸಲಾಗಿದೆ. ಜನವರಿ, ಫೆಬ್ರವರಿ ತಿಂಗಳಲ್ಲಿ ಲಸಿಕೆ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.
ತ್ವರಿತವಾಗಿ ಲಸಿಕೆ ತಲುಪಿಸಲು ವ್ಯವಸ್ಥೆ ಮಾಡುತ್ತೇವೆ. ನಮ್ಮೆಲ್ಲರ ಪ್ರಯತ್ನ ಪ್ರಾಣ ರಕ್ಷಣೆ ಮಾಡುವುದರ ಜತೆಗೆ ಆರ್ಥಿಕತೆಯನ್ನು ಹೆಚ್ಚಿಸುವುದು ಆಗಿದೆ.
ಕಳೆದ ಬಾರಿ ಪರಿಸ್ಥಿತಿ ಭಿನ್ನವಾಗಿತ್ತು. ಆಗ ಈ ಮಹಾಮಾರಿಯ ವಿರುದ್ಧ ಹೋರಾಡಲು ಸರಿಯಾದ ಮೂಲಭೂತ ಸೌಕರ್ಯಗಳು ಇರಲಿಲ್ಲ. ಮೊದಲನೆ ಅಲೆಯಲ್ಲಿ ಕೊರೊನಾ ಹೋರಾಡುವ ಮಾಹಿತಿ ಇಲ್ಲ. ಅತ್ಯಾಧುನಿಕ ಲ್ಯಾಬ್, ಪಿಪಿಇ ಕಿಟ್ ಗಳ ಕೊರತೆ ಇತ್ತು.
ಆದರೆ ಸದ್ಯ ಅತ್ಯುತ್ತಮ ಚಿಕಿತ್ಸಾ ವ್ಯವಸ್ಥೆ ಇದೆ. ಅತ್ಯಾಧುನಿಕ ಲ್ಯಾಬ್, ಪಿಪಿಇ ಕಿಟ್ ಇದೆ ಎಂದರು.