ಶ್ರೀ ಲಕ್ಷ್ಮೀಜನಾರ್ಧನ ಯಕ್ಷಗಾನ ಕಲಾ ಸಂಘ ದೊಂಡೇರಂಗಡಿಯ ವಾರ್ಷಿಕೋತ್ಸವ

ಕಾರ್ಕಳ: ನಮ್ಮ ಸಂಸ್ಕೃತಿಯು ಬಹಳ ಪ್ರಾಚೀನ ಹಾಗೂ ಬೆಲೆ ಬಾಳುವಂಥದ್ದು,ಈ ಆಧುನಿಕ ಕಾಲದಲ್ಲಿ 12ವರುಷಗಳಿಂದ ಜನಪದ ಕಲೆಗಳ ವಿಶಿಷ್ಟ ಕಲೆಯಾದಂತಹ  ಯಕ್ಷಗಾನದ ಸೇವೆ ಮಾಡುತ್ತಿರುವ ದೊಂಡೇರಂಗಡಿ ಶ್ರೀ ಲಕ್ಷ್ಮೀಜನಾರ್ಧನ ಯಕ್ಷಗಾನ ಕಲಾ ಸಂಘದ ಕಾರ್ಯ ಶ್ಲಾಘನೀಯ ಎಂದು ಉದ್ಯಮಿ ಸಂತೋಷ ಪೂಜಾರಿ ಹೇಳಿದರು.
ಇವರು ಶ್ರೀ ಲಕ್ಷ್ಮೀಜನಾರ್ಧನ ಯಕ್ಷಗಾನ ಕಲಾ ಸಂಘ ದೊಂಡೇರಂಗಡಿಯ 12ನೇ ವರ್ಷದ ವಾರ್ಷಿಕೋತ್ಸವದ ಸಭಾಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ವೈದ್ಯಾಧಿಕಾರಿ ಚಂದ್ರಿಕಾ ಕಿಣಿ ಮಾತನಾಡಿ ಮಕ್ಕಳಲ್ಲಿ ವಿವಿಧ ಪ್ರತಿಭೆಗಳು ಅಡಗಿರುತ್ತವೆ. ಈ ಪ್ರತಿಭೆಗಳನ್ನು ಹೊರತರುವುದು ಪೋಷಕರ ಕರ್ತವ್ಯ ಎಂದರು.
ಗಣ್ಯರ ಸಮ್ಮುಖದಲ್ಲಿ ಯಕ್ಷಗುರು ಅಶೋಕ್ ಕುಮಾರ್ ಮುದ್ರಾಡಿಯಾವನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ರಾಮ ಮಂದಿರ ದೊಂಡೇರಂಗಡಿ ಇದರ ಆಡಳಿತ ಮಂಡಳಿ ಅಧ್ಯಕ್ಷರಾದ ಜಯರಾಮ್ ನಾಯಕ್ ವಹಿಸಿದ್ದರು. ಕಡ್ತಲ ಗ್ರಾ.ಪಂ ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ,ಲಕ್ಷ್ಮೀಜನಾರ್ಧನ ಯಕ್ಷಗಾನ ಕಲಾ ಸಂಘದ ಗೌರವಾಧ್ಯಕ್ಷ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಂಕರ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು