ಹೊಸಬೆಳಕು ಸೇವಾ ಟ್ರಸ್ಟ್ ಗೆ 1 ಲಕ್ಷ ರೂ ದೇಣಿಗೆ

ಉಡುಪಿ: ಹೊಸಬೆಳಕು ಸೇವಾ ಟ್ರಸ್ಟ್ (ರಿ) ಮಾಣಿಕುಮೇರಿ, ಕೌಡೂರು ಗ್ರಾಮ ಬೈಲೂರು, ಕಾರ್ಕಳ ಇದರ ಹೊಸಬೆಳಕು ಆಶ್ರಮದ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮ ಸೋಮವಾರದಂದು ನಡೆಯಿತು. ಮುಖ್ಯ ಅತಿಥಿಯಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಇದರ ಗೌರವ ಅಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ 1 ಲಕ್ಷ ರೂಪಾಯಿ ದೇಣಿಗೆಯನ್ನು ಆಶ್ರಮದ ಮುಖ್ಯಸ್ಥ ವಿನಯಾ ಚಂದ್ರ , ತನುಲಾ ತರುಣ್ ಇವರಿಗೆ ನೀಡಿದರು.

ಸಂಸ್ಥೆಯ ವತಿಯಿಂದ ವಿಶ್ವನಾಥ ಶೆಣೈ ಇವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಎಂಜಿನಿಯರ್ ಶ್ರೀಧರ್ ಆಚಾರ್ಯ ಉಡುಪಿ , ನಾಯಕ್ ಎಲೆಕ್ಟ್ರಿಕ್ಸ್ ಮಾಲಕದ ರವೀಂದ್ರ ನಾಯಕ್ ಉಡುಪಿ, ಪ್ರಭಾ ವಿ ಶೆಣೈ , ದೇವದಾಸ್ ಕಾಮತ್ , ಆಶ್ರಮದ ಟ್ರಸ್ಟ್ ನ ಸದಸ್ಯರು, ಆಶ್ರಮ ನಿವಾಸಿಗಳು ಉಪಸ್ಥಿತರಿದ್ದರು.