ಚೀನಾದ ರಫ್ತಿನ ಮೇಲೆ ಶೇ.100ರಷ್ಟು ಸುಂಕ: ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಚೀನಾದ ಮೇಲೆ ಹೆಚ್ಚುವರಿ ಶೇ.100 ರಷ್ಟು ಸುಂಕವನ್ನು ಘೋಷಿಸದ್ದಲ್ಲದೆ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಶೃಂಗಸಭೆಯನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಹೌದು, ಎರಡು ದೊಡ್ಡ ಆರ್ಥಿಕತೆಗಳ ನಡುವಿನ ವ್ಯಾಪಾರ ಯುದ್ಧ ಉಲ್ಬಣಗೊಂಡಿರುವುದರಿಂದ, ಚೀನಾ ಪಾವತಿಸುತ್ತಿರುವ ಯಾವುದೇ ಇತರ ಸುಂಕಗಳಿಗಿಂತ ನವೆಂಬರ್ 1 ರಿಂದ ಚೀನಾದ ರಫ್ತಿನ ಮೇಲೆ 100 ಪ್ರತಿಶತ ಸುಂಕವನ್ನು ವಿಧಿಸುವುದಾಗಿ ಟ್ರಂಪ್​ ತಮ್ಮ ಸೋಶಿಯಲ್​ ಮೀಡಿಯಾ ಟ್ರೂತ್​ನಲ್ಲಿ ಹೇಳಿದ್ದಾರೆ.

ನವೆಂಬರ್ 1 ರಿಂದ ಜಾರಿಗೆ ಬರಲಿರುವ ಅಪರೂಪದ ಭೂಮಿಯ ಖನಿಜಗಳ ಮೇಲೆ ರಫ್ತು ಮಿತಿಗಳನ್ನು ವಿಧಿಸುವ ಚೀನಾದ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ ಟ್ರಂಪ್ ತಮ್ಮ ಸಾಫ್ಟ್‌ವೇರ್ ಮೇಲಿನ ಸುಂಕ ಮತ್ತು ರಫ್ತು ನಿಯಂತ್ರಣಗಳನ್ನು ಹೆಚ್ಚಿಸಿದ್ದಾರೆ.

“ಚೀನಾ ಅಂತಹ ಕ್ರಮ ಕೈಗೊಂಡಿದೆ ಎಂದು ನಂಬಲು ಅಸಾಧ್ಯ, ಆದರೆ ಅವರು ಮಾಡಿದ್ದಾರೆ, ಮತ್ತು ಉಳಿದದ್ದು ಇತಿಹಾಸ” ಎಂದು ಅವರು ಟ್ರೂತ್ ಸೋಶಿಯಲ್‌ನಲ್ಲಿ ಹೇಳಿದರು.