ಉಡುಪಿ ಬೀಚ್ ಉತ್ಸವ: ಶ್ವಾನ ಪ್ರದರ್ಶನ -ನೊಂದಣಿಗೆ ಆಹ್ವಾನ

ಉಡುಪಿ  : ಉಡುಪಿ ಬೀಚ್ ಉತ್ಸವ-2019 ರ ಅಂಗವಾಗಿ ಜಿಲ್ಲಾ ಆಡಳಿತ ಮತ್ತು ಪಶು ಪಾಲನಾ ಇಲಾಖೆ ಉಡುಪಿ ವತಿಯಿಂದ ಶ್ವಾನ ಪ್ರದರ್ಶನವನ್ನು ಡಿಸೆಂಬರ್ 29 ರಂದು ಮಧ್ಯಾಹ್ನ 2 ಗಂಟೆಗೆ ಮಲ್ಪೆ ಬೀಚ್‍ನಲ್ಲಿ ಆಯೋಜಿಸಲಾಗಿದೆ.

ಸದರಿ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವ ಶ್ವಾನ ಮಾಲಿಕರು ನೋಂದಾವಣಿ ಮಾಡುವ ಕುರಿತು ಹೆಚ್ಚಿನ ವಿವರಗಳಿಗಾಗಿ ಉಡುಪಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಹರೀಶ್ ತಾಮನಕರ್ ಪಿ. (ಮೊ.ಸಂಖ್ಯೆ: 9448769997), ಉದ್ಯಾವರ ಪಶುಚಿಕಿತ್ಸಾಲಯದ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸದೀಪ ಕುಮಾರ್ (ಮೊ.ಸಂಖ್ಯೆ: 9845514887), ಹಿರಿಯಡ್ಕ ಪಶು ಚಿಕಿತ್ಸಾಲಯದ ಹಿರಿಯ ಪಶು ವೈದ್ಯಾಧಿಕಾರಿ ಡಾ.ಉದಯ ಕುಮಾರ್ ಶೆಟ್ಟಿ (ಮೊ.ಸಂಖ್ಯೆ: 9448623690), ಮಲ್ಪೆ ಶಿವಪಂಚಾಕ್ಷರಿ ಭಜನಾ ಸಂಘದ ಬಾಲಚಂದ್ರ ಸಾಲಿಯಾನ್ (ಮೊ.ಸಂಖ್ಯೆ: 9886336228) ನ್ನು ಸಂಪರ್ಕಿಸುವಂತೆ ಉಡುಪಿ ಪಶು ಪಾಲನೆ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.