ದೊಡ್ಡಣ್ಣ ಗುಡ್ಡೆ “ಶ್ರೀ ದುರ್ಗಾಆದಿಶಕ್ತಿ ಕ್ಷೇತ್ರ”ಕಪಿಲ ಗೋ ಮಂದಿರಕ್ಕೆ ಜವಾರಿ ತಳಿಯ ಗೋವುಗಳ ಆಗಮನ

ಉಡುಪಿ :ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಕಪಿಲ ಗೋಮಂದಿರಕ್ಕೆ ಜವಾರಿ ಜಾತಿಯ ಗೋವುಗಳ ಸೇರ್ಪಡೆಯಾಗಿದೆ.

ಈಗಾಗಲೇ ಶ್ರೀ ಕ್ಷೇತ್ರದ ಗೋಶಾಲೆಯಲ್ಲಿ ದೇಸಿ ತಳಿಗಳ ವಿವಿಧ ಜಾತಿಗಳ ಗೋವುಗಳನ್ನು ಸಾಕುತ್ತಿದ್ದು ದೇಸಿ ಗೋ ತಳಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗೋಶಾಲೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.ಇದನ್ನು ಮನಗಂಡ ಬಾದಾಮಿ ಜಿಲ್ಲೆಯ ಸಿದ್ದೇಶ್ವರ ದಂಪತಿಗಳು ಶ್ರೀ ಕ್ಷೇತ್ರಕ್ಕೆ ಶ್ವೇತ ವರ್ಣದ ಜವಾರಿತಳಿಯ ದನ ಹಾಗೂ ಕರುವನ್ನು ಕಾಣಿಕೆಯಾಗಿ ನೀಡಿದ್ದಾರೆ.

ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಅವರ ಮಾರ್ಗದರ್ಶನದಲ್ಲಿ ಸಾಂಪ್ರದಾಯಿಕವಾದ ಗೋಪೂಜೆಯನ್ನು ನೆರವೇರಿಸಿ ಗೋಮಾತೆಯನ್ನು ಕ್ಷೇತ್ರದ ಗೋಶಾಲೆಗೆ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.