ಉಡುಪಿ: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ವೈದ್ಯರ ದಿನಾಚರಣೆಯ ಪ್ರಯುಕ್ತ ಅಜ್ಜರಕಾಡು ಜಿಲ್ಲಾಸ್ಪತ್ರೆಯ ನ್ಯಾಯವಿಧಿ ಶಾಸ್ತ್ರ ತಜ್ಞ ಡಾ. ರಮೇಶ್ ಕುಂದರ್ ಅವರನ್ನು ಹೊಸ ಶವಗಾರದ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ನ್ಯಾಯವಿಧಿ ಶಾಸ್ತ್ರ ತಜ್ಞರಾದ ಡಾ.ರಮೇಶ ಕುಂದರ್ ಅವರು, ತಮ್ಮ ವೃತ್ತಿ ಬದುಕಿನಲ್ಲಿ ಹತ್ತು ಸಾವಿರಕ್ಕೂ ಅಧಿಕ ಶವಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು, ಕ್ಲಪ್ತ ಸಮಯದಲ್ಲಿ ನಾಗರಿಕ ಸೇವೆಯನ್ನು ಪ್ರಾಮಾಣಿಕವಾಗಿ ನೀಡುತ್ತಿರುವರು, ವೈದ್ಯರ ಅನನ್ಯ ಸೇವೆಯ ಬಗ್ಗೆ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಪ್ರಾಸ್ತವಿಕ ಮಾತುಗಳಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ನಾಗರಿಕ ಸಮಿತಿಯ ಗೌರವಧ್ಯಕ್ಷರಾದ ಎಂ ಶ್ರೀನಾಗೇಶ್ ಹೆಗ್ಡೆ, ಗಿರಿಜಾ ಹೆಲ್ತ್ ಕೇರ್ ಮಳಿಗೆಯ ಪಾಲುದಾರ ರವೀಂದ್ರ ಕೆ. ಶೆಟ್ಟಿ, ಹಾಗೂ ನಾಗರಿಕ ಸಮಿತಿಯ ಸದಸ್ಯರಾದ ಕೆ. ಬಾಲಗಂಗಾಧರ್ ರಾವ್, ತಾರಾನಾಥ್ ಮೇಸ್ತ ಶಿರೂರು ಉಪಸ್ಥಿತರಿದ್ದರು.












