ಮಂಗಳೂರು: ಏಳು ಮಂದಿ ಶಾಸಕರನ್ನು ನೀಡಿದ ದಕ್ಷಿಣ ಕನ್ನಡ ಜಿಲ್ಲೆಗೆ ಕೈ ತಪ್ಪಿದ ಸಚಿವ ಸ್ಥಾನದಿಂದಾಗಿ ಕಾರ್ಯಕರ್ತರು ತೀವ್ರ ನಿರಾಶೆಯಾಗಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ.
ಸತತ ಆರು ಬಾರಿ ಗೆದ್ದಿರುವ ಸುಳ್ಯ ಶಾಸಕ ಎಸ್ ಅಂಗಾರ ಅವರಿಗೂ ಸಚಿವ ಸ್ಥಾನವಿಲ್ಲ. ಮಂತ್ರಿ ಸ್ಥಾನ ಖಚಿತವೆಂಬ ಭರವಸೆಯೊಂದಿಗೆ ಕುಟುಂಬ ಸದಸ್ಯರನ್ನು ಬೆಂಗಳೂರಿಗೆ ಕರೆದಿದ್ದರು. ಅಂಗಾರ ಪ್ರಮಾಣ ವಚನ ದೃಶ್ಯ ಕಣ್ತುಂಬಿಕೊಳ್ಳಲು ಸುಳ್ಯದಿಂದ ಸುಮಾರ 100 ಹೆಚ್ಚು ಕಾರ್ಯಕರ್ತರು ಬೆಂಗಳೂರಿಗೆ ತೆರಳಿದ್ದರು. ಅಂಗಾರಗೆ ಹಾಗೂ ಜಿಲ್ಲೆಯ ಯಾವ ಶಾಸಕರಿಗೂ ಮಂತ್ರಿ ಸ್ಥಾನ ಸಿಗದೆ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ನಿರಾಶೆ ಉಂಟಾಗಿದೆ.

















