ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: 81.15% ವಿದ್ಯಾರ್ಥಿಗಳು ಉತ್ತೀರ್ಣ; ದ.ಕ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಬುಧವಾರ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು karresults.nic.in ಅಥವಾ kseab.karnataka.gov.in ನಲ್ಲಿ ಫಲಿತಾಂಶಗಳನ್ನು ಪರಿಶೀಲಿಸಬಹುದು.

ಈ ವರ್ಷ ಮಾರ್ಚ್‌ನಲ್ಲಿ ನಡೆದ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 6,81,079 ವಿದ್ಯಾರ್ಥಿಗಳು ಹಾಜರಾಗಿದ್ದರು. ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ 5,52,690 ರಷ್ಟಿದ್ದರೆ, 17,299 ಜನರು ಪರೀಕ್ಷೆಗೆ ಹಾಜರಾಗಿರಲಿಲ್ಲ.

ವಿಜ್ಞಾನ ವಿಭಾಗದಲ್ಲಿ 85.71% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ವಾಣಿಜ್ಯ ವಿಭಾಗದಲ್ಲಿ 75.89% ಮತ್ತು ಕಲಾ ವಿಭಾಗದಲ್ಲಿ 61.22% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಎರಡನೇ ಪರೀಕ್ಷೆ (2024 ದ್ವಿತೀಯ ಪಿಯುಸಿ ಪರೀಕ್ಷೆ-2) ಏಪ್ರಿಲ್ 29 ರಿಂದ ಮೇ 16 ರವರೆಗೆ ನಡೆಯಲಿದೆ.

ವಿಜ್ಞಾನ ವಿಭಾಗ: 2,49,927 (89.96%) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ
ವಾಣಿಜ್ಯ: 1,74,315 (80.94%) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ
ಕಲೆ: 1,28,448 (68.36%) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡವು “ಉತ್ತಮ ಪ್ರದರ್ಶನದ ಜಿಲ್ಲೆ” ಯಾಗಿ ಹೊರಹೊಮ್ಮಿದೆ. ದಕ್ಷಿಣ ಕನ್ನಡದಿಂದ 97.33% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಉಡುಪಿ (96.8%) ಮತ್ತು ವಿಜಯಪುರ (94%) ಜಿಲ್ಲೆಗಳು ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿವೆ.

ವಿಜ್ಞಾನ ವಿಭಾಗದಲ್ಲಿ ವಿದ್ಯಾಲಕ್ಷ್ಮಿ 598 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮೇಧಾ ಡಿ, ವೇದಾಂತ್ ಜ್ಞಾನುಬಾ ನಾವಿ ಮತ್ತು ಕವಿತಾ ಬಿ ವಿ ಕರ್ನಾಟಕ ಕಲಾ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಮೂವರೂ ತಲಾ 596 ಅಂಕ ಗಳಿಸಿದ್ದಾರೆ. 1.28 ಲಕ್ಷ ವಿದ್ಯಾರ್ಥಿಗಳು ಅಥವಾ 68.36% ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 2,15,357 ವಿದ್ಯಾರ್ಥಿಗಳಲ್ಲಿ 1,74,315 (80.94%) ಉತ್ತೀರ್ಣರಾಗಿದ್ದಾರೆ.

ಬಾಲಕಿಯರ ತೇರ್ಗಡೆ ಪ್ರಮಾಣ: ಶೇ.84.87
ಬಾಲಕರ ಉತ್ತೀರ್ಣ ಪ್ರಮಾಣ: 76.98