udupixpress
Home Trending ದ.ಕ.ಜಿಲ್ಲೆ: ಕೊರೋನಾಗೆ 7 ಮಂದಿ ಬಲಿ: 297 ಮಂದಿಗೆ ಪಾಸಿಟಿವ್

ದ.ಕ.ಜಿಲ್ಲೆ: ಕೊರೋನಾಗೆ 7 ಮಂದಿ ಬಲಿ: 297 ಮಂದಿಗೆ ಪಾಸಿಟಿವ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೋನಾಗೆ 7 ಮಂದಿ ಬಲಿಯಾಗಿದ್ದು, ಬರೋಬ್ಬರಿ 297 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಸಾವನ್ನಪ್ಪಿದವರ ಪೈಕಿ ಮಂಗಳೂರು ನಗರದ ಐದು ಮಂದಿ ಹಾಗೂ ಇಬ್ಬರು ಹೊರ ಜಿಲ್ಲೆಯವರು.
ಜಿಲ್ಲೆಯಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 337ಕ್ಕೆ ಏರಿಕೆಯಾಗಿದೆ.
ಇಂದು ಮಂಗಳೂರಿನ 160, ಸುಳ್ಯದ 42, ಬಂಟ್ವಾಳದ 36, ಬೆಳ್ತಂಗಡಿಯ 21, ಪುತ್ತೂರಿನ 14, ಹಾಗೂ ಹೊರ ಜಿಲ್ಲೆಯ 24 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಸಂಪರ್ಕವೇ ಪತ್ತೆಯಾಗದ 123, ILI ಪ್ರಕರಣದಿಂದ 99, ಪ್ರಾಥಮಿಕ ಸಂಪರ್ಕದಿಂದ 61, SARI ಪ್ರಕರಣದಿಂದ 14 ಮಂದಿಗೆ ಸೋಕು‌ ತಗುಲಿದೆ.
ಇಂದು ಜಿಲ್ಲೆಯಲ್ಲಿ 257 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 11,389 ಪಾಸಿಟಿವ್ ಕೇಸ್ ಧೃಡಪಟ್ಟಿದ್ದು, ಒಟ್ಟು 2,372 ಆಕ್ವೀವ್ ಕೇಸ್ ಇದೆ.