ಗಿಡಗಳ ಕಡಿಯದೆ ತೋಟದಲ್ಲೇ ಬೃಹತ್ ಚಪ್ಪರ ನಿರ್ಮಾಣ: ಭಾರೀ ಪ್ರಶಂಸೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ‌ಪುತ್ತೂರಿನಲ್ಲಿ ನಡೆದ ಬ್ರಹ್ಮಕಲಶೋತ್ಸವದಲ್ಲಿ ದೇವಸ್ಥಾನದ ಪಕ್ಕದಲ್ಲೇ ಇದ್ದ ಮರಗಳನ್ನು ಕಡಿಯದೇ ಚಪ್ಪರ ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹಿರೇಂಬಾಡಿ ಗ್ರಾಮದಲ್ಲಿ ಉಳಿತ್ತೋಡಿ‌ ಶ್ರೀ ಷಣ್ಮುಖ ದೇವಸ್ಥಾನದ ಬ್ರಹ್ಮಕಲಶ ಫೆಬ್ರವರಿ ೨೦ ರಿಂದ ೨೯ರವರೆಗೆ ಬ್ರಹ್ಮಕಲಶ ನಡೆದಿತ್ತು. ಆದರೆ ಊಟಕ್ಕೆ ಮೀಸಲಿಟ್ಟ ಸ್ಥಳದಲ್ಲಿ ನೂರಾರು ಅಡಿಕೆ ಮರಗಳು ಇತ್ತು ಆದ್ರೆ ಒಂದು ಮರವನ್ನು ಕಡಿಯದೇ ನೆಲಕ್ಕೆ ಕಾರ್ಪೆಟ್ ಹಾಸಿ ಅಡಿಕೆ ಗರಿ ಕಸ ಬೀಳದಂತೆ ಮೇಲೆ ಹಸಿರ ಹೊದಿಕೆ ಹಾಕಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಮಾಡಲಾಗಿತ್ತು. ಸದ್ಯ ತುಮಕೂರು ಘಟನೆ ನಂತರ ಯಾವ ರೀತಿಯಲ್ಲಿ ಪರಿಸರವನ್ನು ನಾಶ ಮಾಡದೇ ಕಾರ್ಯಕ್ರಮ ಮಾಡಬಹುದು ಅಂತ ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.