ದ.ಕ. ಜಿಲ್ಲೆ: ಓರ್ವ ಕೊರೊನ‌ ಸೋಂಕಿತ‌ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಮಂಗಳೂರು: ದ.ಕ ಜಿಲ್ಲೆಯ 13ನೇ ಕೊರೋನಾ ರೋಗಿ ಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬುಧವಾರ ಡಿಸ್ಚಾರ್ಜ್ ಆಗಿದ್ದಾರೆ.
ದೆಹಲಿಗೆ ವೈಯಕ್ತಿಕ ‌ಕೆಲಸ ನಿಮಿತ್ತ ತೆರಳಿದ್ದ 39 ವರ್ಷದ ಉಪ್ಪಿನಂಗಡಿ ನಿವಾಸಿಗೆ ಎ.17ರಂದು ಕೊರೋನಾ ಸೋಂಕು ಪತ್ತೆಯಾಗಿತ್ತು.
ಆ ಬಳಿಕ ಇವರ ಪತ್ನಿಗೂ ಕೊರೋನಾ ಸೋಂಕು ತಗುಲಿತ್ತು. ಸದ್ಯ ಪತ್ನಿಗೆ ಚಿಕಿತ್ಸೆ ಮುಂದುವರಿದಿದೆ.
ದ‌.ಕ ಜಿಲ್ಲೆಯಲ್ಲಿ 12 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ಪ್ರಕರಣಗಳು 28 ಪ್ರಕರಣ ಕಂಡುಬಂದಿದೆ. ಮೂವರು ಮೃತಪಟ್ಟಿದ್ದಾರೆ.
ಈವರೆಗೆ 13 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.