ದ.ಕ ಜಿಲ್ಲೆಯಾದ್ಯಂತ ಉತ್ತಮ‌‌ ಮಳೆ: ಹಲವೆಡೆ ಹಾನಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ  ಸೋಮವಾರವೂ ಭಾರೀ ಮಳೆ ಸುರಿಯುತ್ತಿದೆ. ಕಳೆದೆರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ‌ ಕೆಲವೆಡೆ ಹಾನಿ ಸಂಭವಿಸಿದೆ.
ಅಮ್ಮುಂಜೆ ಕಲಾಯಿ ಹೊಸನಗರದಲ್ಲಿ ಅಂಗಡಿ ಮೇಲೆ ಬಿದ್ದಿದ್ದು, ಸ್ಥಳೀಯರಿಂದ ಮರ ತೆರವು ಕಾರ್ಯಾಚರಣೆ ನಡೆಯಿತು.
ಅಂಬ್ಲಮೊಗರುವಿನ ಮದಕ‌ ಗುಡ್ಡೆಯಲ್ಲಿ ಅಬ್ಬಾಸ್ ಮತ್ತು ರಝಾಕ್ ಎಂಬವರ ಮನೆಗೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿದೆ.
ಗುಡ್ಡ ಕುಸಿತಕ್ಕೆ ಧರೆಗುರುಳಿದ ವಿದ್ಯುತ್ ಕಂಬ. ಮನೆಯವರ ಸಮಯ ಪ್ರಜ್ನೆಯಿಂದ ಅನಾಹುತ ತಪ್ಪಿದಂತಾಗಿದೆ.
 
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಪುತ್ತೂರು ಭಾಗಗಳಲ್ಲ ಉತ್ತಮ ಮಳೆಯಾಗಿದೆ.