ಲಂಡನ್: ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಅವರು ವಿಂಬಲ್ಡನ್ ಚಾಂಪಿಯನ್ಶಿಪ್ನ ಪುರುಷರ ಡಬಲ್ಸ್ನಲ್ಲಿ ಕ್ವಾರ್ಟರ್ಫೈನಲ್ ತಲುಪಿದ್ದಾರೆ. ಅವರು ತಮ್ಮ ರೌಂಡ್ ಆಫ್ 16 ಪಂದ್ಯದಲ್ಲಿ ನೆದರ್ಲೆಂಡ್ಸ್ನ ಡೇವಿಡ್ ಪೆಲ್ ಮತ್ತು ಯುಎಸ್ಎಯ ರೀಸ್ ಸ್ಟಾಲ್ಡರ್ ಅವರನ್ನು ಸೋಲಿಸಿದರು. ಆಲ್ ಇಂಗ್ಲೆಂಡ್ ಕ್ಲಬ್ನ ಗ್ರಾಸ್ ಕೋರ್ಟ್ನಲ್ಲಿ ಆರನೇ ಶ್ರೇಯಾಂಕದ ಇಂಡೋ-ಆಸೀಸ್ ಜೋಡಿ 7-5, 4-6, 7(10)-6(5) ರಿಂದ ಎರಡು ಗಂಟೆ 19 ನಿಮಿಷಗಳಲ್ಲಿ ಶ್ರೇಯಾಂಕ ರಹಿತ ಪೆಲ್ ಮತ್ತು ಸ್ಟಾಲ್ಡರ್ ವಿರುದ್ಧ ಜಯಗಳಿಸಿತು.
ವಿಂಬಲ್ಡನ್ ಚಾಂಪಿಯನ್ಶಿಪ್ ಪುರುಷರ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಕ್ವಾರ್ಟರ್ಫೈನಲ್ಸ್ ಪ್ರವೇಶಿಸಿದರೆ, ಪುರುಷರ ಸಿಂಗಲ್ಸ್ನಲ್ಲಿ ನೊವಾಕ್ ಜೊಕೊವಿಕ್ ಸೆಮಿಫೈನಲ್ಸ್ ತಲುಪಿದ್ದಾರೆ.ವಿಂಬಲ್ಡನ್ನ ಪುರುಷರ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಎಟಿಪಿ ಪುರುಷರ ಡಬಲ್ಸ್ ಶ್ರೇಯಾಂಕದಲ್ಲಿ ವಿಶ್ವದ 12ನೇ ಶ್ರೇಯಾಂಕದ ಬೋಪಣ್ಣ ಮತ್ತು ಅದೇ 16ನೇ ಶ್ರೇಯಾಂಕದ ಎಬ್ಡೆನ್ ಮೊದಲ ಸೆಟ್ನಲ್ಲಿ ಶಿಸ್ತಿನ ಪ್ರದರ್ಶನ ನೀಡಿದರು. ಎರಡು ಜೋಡಿಯ ನಡುವಿನ ಹೋರಾಟ ತೀವ್ರ ಪೈಪೋಟಿಯಿಂದ ಕೂಡಿತ್ತು. ಮೊದಲ ಸೆಟ್ನ್ನು ಸರಳವಾಗಿ ಗೆದ್ದುಕೊಂಡಿದ್ದ ಇಂಡೋ ಆಸಿಸ್ ಜೋಡಿಗೆ ಎರಡನೇ ಸೆಟ್ನಲ್ಲಿ 4-6 ಅಂತರದ ಸೋಲು ಎದುರಾಗಿತ್ತು.
ಕ್ವಾರ್ಟರ್ನಲ್ಲಿ ಅವರು ಡಚ್ ಜೋಡಿಯಾದ ಬಾರ್ಟ್ ಸ್ಟೀವನ್ಸ್ ಮತ್ತು ಟ್ಯಾಲನ್ ಗ್ರೀಕ್ಸ್ಪೂರ್ ಅವರನ್ನು ಎದುರಿಸಲಿದ್ದಾರೆ. ಇದಕ್ಕೂ ಮುನ್ನ ಸೋಮವಾರ ನಡೆದ ಪಂದ್ಯದಲ್ಲಿ ಎರಡನೇ ಸುತ್ತಿನಲ್ಲಿ ಬೋಪಣ್ಣ-ಎಬ್ಡೆನ್ ನೇರ ಗೇಮ್ಗಳಲ್ಲಿ ಬ್ರಿಟನ್ನ ಜಾಕೋಬ್ ಫಿಯರ್ನ್ಲಿ ಮತ್ತು ಜೊಹಾನಸ್ ವಿರುದ್ಧ ಜಯ ಸಾಧಿಸಿದ್ದರು.
ಬೋಪಣ್ಣ ವಿಂಬಲ್ಡನ್ 2023ರಲ್ಲಿ ಕ್ವಾರ್ಟರ್ಫೈನಲ್ ವರೆಗೆ ಮುಂದುವರೆದ ಭಾರತ ಆಟಗಾರರಾಗಿದ್ದಾರೆ. ಪುರುಷರ ಡಬಲ್ಸ್ ಜೋಡಿಗಳಾದ ಯೂಕಿ ಭಾಂಬ್ರಿ-ಸಾಕೇತ್ ಮೈನೇನಿ ಮತ್ತು ಜೀವನ್ ನೆಡುಂಚೆಜಿಯನ್-ಎನ್ ಶ್ರೀರಾಮ್ ಬಾಲಾಜಿ ಮೊದಲ ಸುತ್ತಿನಲ್ಲೇ ಸ್ಪರ್ಧೆಯಿಂದ ಹೊರಬಿದ್ದರು. ಅಲ್ಲದೆ, ಅಂಕಿತಾ ರೈನಾ ಮಹಿಳೆಯರ ಸಿಂಗಲ್ಸ್ ಅರ್ಹತಾ ಸುತ್ತಿನಲ್ಲಿ ನಿರ್ಗಮಿಸಿದ್ದರು.
ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಿಂದಾಗಿ ಮೂರನೇ ಸೆಟ್ನ ಆರಂಭ ತಡವಾಯಿತು. ಆದರೆ ಎರಡನೇ ಸೆಟ್ ವೇಳೆಗೆ ಆಗಿದ್ದ ಟೈ ಮೂರನೇ ಸೆಟ್ನಲ್ಲಿ ಬಿಗಿ ಹೋರಾಟಕ್ಕೆ ಕಾರಣವಾಯಿತು. ಎರಡು ಜೋಡಿಯ ನಡುವಿನ ಹೋರಾಟ ಅಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಕಣ್ಣು ಮಿಟುಕಿಸಲೂ ಅವಕಾಶ ನೀಡಲಿಲ್ಲ ಎಂದರೆ ತಪ್ಪಾಗದು. ಈ ತೀವ್ರ ಹೋರಾಟ 6-6 ರಿಂದ ಟೈ ಆಗಿತ್ತು. ಟ್ರೈ ಬ್ರೇಕರ್ನಲ್ಲಿ ಬೋಪಣ್ಣ-ಎಬ್ಡೆನ್ ಮೂರು ಮ್ಯಾಚ್ ಪಾಯಿಂಟ್ಗಳನ್ನು ಉಳಿಸಿ ಸ್ಪರ್ಧೆಯಲ್ಲಿ 10 ಪಾಯಿಂಟ್ಗಳನ್ನು ಗಳಿಸಿತು. ಇದರಿಂದ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿ ಭರ್ಜರಿ ಗೆಲುವು ದಾಖಲಿಸಿತು.
ಟೆನ್ನಿಸ್ ವೃತ್ತಿಪರರ ಸಂಘ (ATP)ನೀಡುವ ಲೈವ್ ಶ್ರೇಯಾಂಕದಲ್ಲಿ ಅವರು ನಂಬರ್ ಒನ್ ಆಗಿದ್ದಾರೆ. ಕಾರ್ಲೋಸ್ ಅಲ್ಕರಾಜ್ ತಮ್ಮ ಅಗ್ರಸ್ಥಾನವನ್ನು ಮರಳಿ ಪಡೆಯಲು ಇಂದು ಕ್ವಾರ್ಟರ್ಫೈನಲ್ಸ್ನಲ್ಲಿ ಹೋಲ್ಗರ್ ರೂನ್ ಅವರನ್ನು ಮಣಿಸಿ ಸೆಮಿಸ್ ಪ್ರವೇಶ ಗಿಟ್ಟಸಿಕೊಳ್ಳಬೇಕಿದೆ.
ಪುರುಷರ ಸಿಂಗಲ್ಸ್: ಲಂಡನ್ನಲ್ಲಿ ನಡೆಯುತ್ತಿರುವ ವಿಂಬಲ್ಡನ್ ಚಾಂಪಿಯನ್ಶಿಪ್ನ ಕ್ವಾರ್ಟರ್ಫೈನಲ್ನಲ್ಲಿ ರಷ್ಯಾದ ವಿರುದ್ಧ ಸರ್ಬಿಯಾದ ಟೆನ್ನಿಸ್ ತಾರೆ ನೊವಾಕ್ ಜೊಕೊವಿಕ್ ಅವರು ಆಂಡ್ರೆ ರುಬ್ಲೆವ್ ಅವರನ್ನು ಸೋಲಿಸಿ ಸೆಮಿಸ್ಗೆ ಪ್ರವೇಶ ಪಡೆದಿದ್ದಾರೆ. ತಮ್ಮ 24 ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗೆ ಮುತ್ತಿಕ್ಕಲು ಇನ್ನು ಎರಡು ಹೆಜ್ಜೆ ಮಾತ್ರ ಬಾಕಿಯಿದೆ.
ಜೊಕೊವಿಕ್ 4-6, 6-1, 6-4, 6-3 ಅಂತರದ ಜಯದೊಂದಿಗೆ ರೋಜರ್ ಫೆಡರರ್ ಅವರ ಪುರುಷರ ಸಿಂಗಲ್ಸ್ ದಾಖಲೆಯನ್ನು ಸರಿಗಟ್ಟುವ ಮೂಲಕ 46 ನೇ ಪ್ರಮುಖ ಸೆಮಿಫೈನಲ್ಗೆ ಪ್ರವೇಶಿಸಿದರು. ಲಂಡನ್ನಲ್ಲಿ ಸತತ ಐದನೇ ಕಿರೀಟ ಮತ್ತು ವಿಂಬಲ್ಡನ್ನ ಎಂಟನೇ ಪ್ರಶಸ್ತಿಯನ್ನು ಗೆದ್ದು ದಾಖಲೆ ನಿರ್ಮಿಸುವ ತಮ್ಮ ಕನಸನ್ನು ಇನ್ನೂ ಜೀವಂತವಾಗಿ ಉಳಿಸಿಕೊಂಡಿದ್ದಾರೆ.