ಬೆಂಗಳೂರು: ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ ಕಾಂಗ್ರೆಸ್ ಕೈವಾಡ ಇದೆ ಎಂದು ಮಾಜಿ ಸಚಿವ ರೋಷನ್ ಬೇಗ್ ಆರೋಪಿಸಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಗಲಭೆಯಲ್ಲಿ ಕೆಲವರು ಅಮಾಯಕರು ಇರಬಹುದು. ಅವರನ್ನು ಬಿಡಿ ಎಂದು ನಾನೇ ಹೇಳಿದ್ದೇನೆ. ಆದರೆ, ಗೋರಿಪಾಳ್ಯದಿಂದ ಮೌಲಾನಾಗಳು ಯಾಕೆ ಇಲ್ಲಿಗೆ ಬರಬೇಕಿತ್ತು. ಟಿಪ್ಪು ನಗರದಿಂದ ಡಿ.ಜೆ ಹಳ್ಳಿಗೆ ಯಾಕೆ ಬರಬೇಕಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.
ಜಮೀರ್ ಬಗ್ಗೆ ಏನು ಮಾತನಾಡಲಿ. ನನಗೆ ಸರಿ ಸಮಾನವಾದ ಸೀನಿಯರ್ ಲೀಡರ್ ನನ್ನ ವಿರುದ್ಧ ಮಾತಾಡಿದರೆ ಉತ್ತರ ಕೊಡುತ್ತಿದ್ದೆ. ಆದರೆ, ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಅವರ ಮನೆ ಮುಂದೆ ವಾಚ್ಮನ್ ಆಗ್ತೀನಿ ಎಂದು ಜಮೀರ್ ಹೇಳಿದ್ದರು. ಮೊದಲು ಯಡಿಯೂರಪ್ಪ ಮನೆ ಹತ್ತಿರ ಹೋಗಿ ವಾಚ್ಮನ್ ಆಗಲಿ’ ಎಂದು ತಿರುಗೇಟು ನೀಡಿದರು.