ಮಣಿಪಾಲ: ಮಹಾರಾಷ್ಟ್ರದ ಪುಣೆಯಲ್ಲಿ ಕರಾಟೆ ಇಂಡಿಯಾ ಸಂಸ್ಥೆ ವತಿಯಿಂದ ಜೂನ್17 ರಿಂದ 19 ರವರೆಗೆ ಆಯೋಜಿಸಲಾಗಿದ್ದ ಅಖಿಲ ಭಾರತ ಕರಾಟೆ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ ಗೆದ್ದ ಎಂಟು ಪದಕಗಳಲ್ಲಿ ಐದು ಪದಕಗಳು ಉಡುಪಿ ಜಿಲ್ಲೆಯ ಆಟಗಾರರದ್ದಾಗಿತ್ತು. 2 ಚಿನ್ನ, 2 ಬೆಳ್ಳಿ, 1 ಕಂಚಿನೊಂದಿಗೆ ಜಿಲ್ಲೆಯ ಆಟಗಾರರು ಒಟ್ಟು ಐದು ಪದಕಗಳನ್ನು ತಮ್ಮದಾಗಿಸಿಕೊಂಡರು. ಪದಕ ಗೆದ್ದ ಹಾಗೂ ಭಾಗವಹಿಸಿದ ಎಲ್ಲಾ ಕರಾಟೆ ಆಟಗಾರರಿಗೆ ಉಡುಪಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ವತಿಯಿಂದ ಹಾಗೂ ಮಾಹೆ ಸಹಯೋಗದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪದಕ ಗೆದ್ದ ಪಟುಗಳು:
ಭರತ್ ಬಾಬು ದೇವಾಡಿಗ ಚಿನ್ನದ ಪದಕ (21 ವರ್ಷದೊಳಗಿನವರ 84 ಕೆಜಿಗಿಂತ ಕಡಿಮೆ ತೂಕ), ಅಜಯ್ ಎ ದೇವಾಡಿಗ ಬೆಳ್ಳಿ ಪದಕ (21 ವರ್ಷದೊಳಗಿನವರ 75 ಕೆಜಿಗಿಂತ ಕಡಿಮೆ ತೂಕ), ಚೇತನ್ ಕುಮಾರ್ – ಬೆಳ್ಳಿ ಪದಕ (21 ವರ್ಷದೊಳಗಿನವರ 60 ಕೆಜಿಗಿಂತ ಕಡಿಮೆ ತೂಕ), ಪ್ರನುಷಾ ಎಂ ಪೂಜಾರಿ ಚಿನ್ನದ ಪದಕ (47 ಕೆಜಿಗಿಂತ ಕಡಿಮೆ ತೂಕ ಕೆಡೆಟ್ ವಿಭಾಗ), ಛಾಯಾ ಎಸ್ ಪೂಜಾರಿ ಕಂಚಿನ ಪದಕ (59 ಕೆಜಿಗಿಂತ ಕಡಿಮೆ ತೂಕ ಜೂನಿಯರ್ ವಿಭಾಗ)
ಪವನ್ ಎನ್ ಪೂಜಾರಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2022 ರಲ್ಲಿ 84+ ಕೆಜಿ ತೂಕ ವಿಭಾಗದಲ್ಲಿ ಭಾಗವಹಿಸಿದ್ದರು.
ಮಾಹೆ ಮಣಿಪಾಲದ ಆಡಳಿತ ಮಂಡಳಿ, ಪ್ರಾಂಶುಪಾಲರು, ಪ್ರಾಧ್ಯಾಪಕರು, ಜಿಲ್ಲಾ ಕರಾಟೆ ಅಸೋಸಿಯೇಶನ್ನಿನ ಪದಾಧಿಕಾರಿಗಳು ಹಾಗೂ ಹಿರಿಯ ಕರಾಟೆ ಪಟುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.