ಉಡುಪಿ: ಉಡುಪಿಯ ವಿಕ್ಟೋರಿಯಾ ಜುಬಿಲಿ ಯೂನಿಯನ್ ಕ್ಲಬ್ ಇವರ ಆಶ್ರಯದಲ್ಲಿ ಹಾಗೂ ಟೇಬಲ್ ಟೆನಿಸ್ ಚಾಂಪಿಯನ್ ದಿ. ಬಿ.ಯು.ಕೃಷ್ಣಮೂರ್ತಿ ಇವರ ನೆನಪಿನಲ್ಲಿ, ಉಡುಪಿ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ನ ನೇತೃತ್ವದಲ್ಲಿ, ಜುಲೈ 30 ಮತ್ತು 31 ರಂದು ನಗರದ ವಿಜೆಯು ಕ್ಲಬ್ ನಲ್ಲಿ, ಉಡುಪಿ ಜಿಲ್ಲೆಯ ಟೇಬಲ್ ಟೆನಿಸ್ ಆಟಗಾರರಿಗೆ ಟೂರ್ನಮೆಂಟ್ ನಡೆಯಲಿದೆ.
ಟೂರ್ನಮೆಂಟ್ ನಲ್ಲಿ ಭಾಗವಹಿಸುವವರು ಜುಲೈ 28 ರೊಳಗೆ ತಮ್ಮ ಹೆಸರನ್ನು ಪಾರಿತೋಷಕ್ (ದೂರವಾಣಿ: 8971898557) ಇವರಲ್ಲಿ ನೋಂದಾಯಿಸಬೇಕು ಎಂದು ಕ್ಲಬ್ ನ ಕಾರ್ಯದರ್ಶಿ ಮುರಳೀಧರ್ ಕೆ.ಎನ್ ತಿಳಿಸಿದ್ದಾರೆ.