ಉಡುಪಿ: ಮಕ್ಕಳಲ್ಲಿ ರಾಷ್ಟ್ರಪ್ರೇಮವನ್ನು ಉದ್ದೀಪನಗೊಳಿಸುವ ಸಲುವಾಗಿ, ಭಾರತದ 78 ನೇ ಸ್ವಾತಂತ್ರೋತ್ಸವ ಸಂಭ್ರಮದ ಪ್ರಯುಕ್ತ ಉಡುಪಿಯ ಗುಂಡಿಬೈಲಿನ ಶ್ರೀ ಅಭಿರಾಮ ಧಾಮ ಸಂಕೀರ್ತನ ಮಂದಿರದಲ್ಲಿ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆಯನ್ನು ಇದೇ ತಿಂಗಳ 13 ನೇ ತಾರೀಖಿನಂದು (ಬುಧವಾರ) ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ. ಉಡುಪಿ ಜಿಲ್ಲೆಯ ಶಾಲಾ ಮಕ್ಕಳು ಕನ್ನಡ, ಹಿಂದಿ, ತುಳು ಭಾಷೆಗಳಲ್ಲಿ 3ರಿಂದ – 4 ನಿಮಿಷಗಳೊಳಗೆ ದೇಶಭಕ್ತಿ ಗೀತೆಯೊಂದನ್ನು ಪ್ರಸ್ತುತಪಡಿಸಬೇಕಾಗುತ್ತದೆ. ಶಾಲೆಯ 5-6-7 ನೇ ತರಗತಿಯ ಮಕ್ಕಳು ಕಿರಿಯರ ವಿಭಾಗದಲ್ಲೂ, 8 – 9- 10ನೇ ತರಗತಿಯ ಮಕ್ಕಳು ಹಿರಿಯರ ವಿಭಾಗದಲ್ಲೂ ಸ್ಪರ್ಧಿಸಬಹುದು ಎಂದು ಸ್ವರಸಾಮ್ರಾಟ್ ವಿದ್ವಾನ್ ಅಭಿರಾಮ್ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕರ್ನಾಟಕದ, ಪತ್ರಿಕಾ ಪ್ರಕಟಣೆ ತಿಳಿಸಿದೆ.

ಉಡುಪಿ ಜಿಲ್ಲೆಯ ಎಲ್ಲಾ ಶಾಲೆಗಳೂ ಮೊದಲು ತಮ್ಮ ತಮ್ಮ ಶಾಲೆಯೊಳಗೇ, ಆಂತರಿಕವಾಗಿ ದೇಶಭಕ್ತಿಗೀತೆ ಸ್ಪರ್ಧೆಗಳನ್ನಾಯೋಜಿಸಿ ಆನಂತರ ತಮ್ಮ ಶಾಲೆಯ ವತಿಯಿಂದ ಅತ್ಯುತ್ತಮ ತಂಡವೊಂದನ್ನು ಮಾತ್ರ ಆರಿಸಿ ಶ್ರೀ ಅಭಿರಾಮ ಧಾಮ ಸಂಕೀರ್ತನ ಮಂದಿರಕ್ಕೆ ಕಳುಹಿಸಿಕೊಡಬೇಕಾಗಿ ಈ ಮೂಲಕ ಕೋರಲಾಗಿದೆ. ಪ್ರತೀ ತಂಡದಲ್ಲೂ ಕನಿಷ್ಠ ನಾಲ್ಕು, ಹಾಗೂ ಗರಿಷ್ಠ ಆರು ಮಕ್ಕಳಿರಲೇ ಬೇಕಾಗಿದ್ದು, ಮಕ್ಕಳ ಶಾಲೆಯಿಂದ ಉಡುಪಿಯ ಗುಂಡಿಬೈಲಿಗೆ ಬಂದು ಹೋಗುವ ಸಾರಿಗೆ ವೆಚ್ಚವನ್ನು, ತಿಂಡಿ-ಪಾನೀಯಗಳ ವ್ಯವಸ್ಥೆಗಳನ್ನು ಪ್ರತಿಷ್ಠಾನವೇ ಏರ್ಪಾಡುಮಾಡಲಿದೆಯೆಂದು ವಿದ್ವಾನ್ ಅಭಿರಾಮ್ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಪರ್ಲತ್ತಾಯ ಡಾ. ಸುದರ್ಶನ ಭಾರತೀಯ ನಮ್ಮ ಪತ್ರಿಕೆಗೆ ತಿಳಿಸಿದ್ದಾರೆ. ಸ್ಪರ್ಧಾನಂತರ ಆಗಸ್ಟ್ 14 ರಂದು ಫಲಿತಾಂಶ ಪ್ರಕಟಣೆಯಾಗಲಿದ್ದು ಒಂದು ಪ್ರಥಮ ಬಹುಮಾನ, 2 ದ್ವಿತೀಯ ಬಹುಮಾನಗಳು, 3 ತೃತೀಯ ಬಹುಮಾನಗಳು, ಹಲವಾರು ಸಮಾಧಾನಕರ ಬಹುಮಾನಗಳೂ, ವರ್ಣರಂಜಿತ ಪ್ರಮಾಣ ಪತ್ರಗಳನ್ನೂ, ಆಕರ್ಷಣೀಯ ನಗದು ಬಹುಮಾನಗಳನ್ನೂ ವಿತರಿಸಲಾಗುವುದು. ವಿಶೇಷ ಆಕರ್ಷಣೆಯಾಗಿ, ರಾಜ್ಯದಲ್ಲೇ ಪ್ರಪ್ರಥಮ ಬಾರಿಗೇ ದೇಶಭಕ್ತಿ ಗೀತೆಗಾಗಿ ಪರ್ಯಾಯ ಪಾರಿತೋಷಕ ಪ್ರತಿಷ್ಠಾಪಿತಗೊಂಡಿದ್ದು, ಅತ್ಯುತ್ತಮ ದೇಶಭಕ್ತಿ ಗೀತೆಯನ್ನು ಪ್ರಸ್ತುತಪಡಿಸಿದ ಶಾಲೆಗೆ ಸ್ವರಸಾಮ್ರಾಟ್ ವಿದ್ವಾನ್, ಅಭಿರಾಮ್ ಭರತವಂಶಿ ಪರ್ಯಾಯ ಪಾರಿತೋಷಕವನ್ನು ಪ್ರದಾನಮಾಡಲಾಗುವುದೆಂದು ಪ್ರತಿಷ್ಠಾನದ ಕಾರ್ಯದರ್ಶಿ ವಿದುಷಿ, ಸುಷ್ಮಾ ಸುದರ್ಶನ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಆಗಸ್ಟ್ 12ರೊಳಗೆ ಶಾಲಾಪ್ರತಿನಿಧಿಗಳು, ಶಾಲಾ ಮಕ್ಕಳು, ಓದುಗರು ಪ್ರತಿಷ್ಠಾನವನ್ನೇ 7022274686 ರಲ್ಲಿ ಸಂಪರ್ಕಿಸಿ.


















