ಉಡುಪಿ: ಕಾರ್ಮಿಕ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ಕಿರು ಸಾಲ ಸೌಲಭ್ಯ ಯೋಜನೆ, ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ, ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆ ಹಾಗೂ ಇ-ಶ್ರಮ್ ಯೋಜನೆಯ ನೋಂದಣಿಯು ಆ.7 ರಂದು ಬಡಗುಬೆಟ್ಟು, ಚಿಟ್ಪಾಡಿ, ಕಸ್ತೂರ್ಬಾ ನಗರ ಮತ್ತು ಇಂದಿರಾನಗರ ವಾರ್ಡ್ನ ಕಾರ್ಮಿಕರಿಗೆ ಕುಕ್ಕಿಕಟ್ಟೆ ನಾರಾಯಣ ಗುರು ಸಭಾಭವನದಲ್ಲಿ, ಆ. 9 ರಂದು ಪೆರಂಪಳ್ಳಿ, ಗುಂಡಿಬೈಲು, ಕರಂಬಳ್ಳಿ ಹಾಗೂ ಕಡಿಯಾಳಿ ವಾರ್ಡ್ನ ಕಾರ್ಮಿಕರಿಗೆ ದೊಡ್ಡಣಗುಡ್ಡೆ ಜನತಾ ವ್ಯಾಯಾಮ ಶಾಲೆಯಲ್ಲಿ, ಆ.10 ರಂದು ಸರಳೇಬೆಟ್ಟು, ಸೆಟ್ಟಿಬೆಟ್ಟು, ಪರ್ಕಳ ಹಾಗೂ ಈಶ್ವರನಗರ ವಾರ್ಡ್ನ ಕಾರ್ಮಿಕರಿಗೆ ಪರ್ಕಳ ವಿಘ್ನೇಶ್ವರ ಸಭಾಭವನದಲ್ಲಿ, ಆ.12 ರಂದು ಮಣಿಪಾಲ, ಇಂದ್ರಾಳಿ ಹಾಗೂ ಸಗ್ರಿ ವಾರ್ಡ್ನ ಕಾರ್ಮಿಕರಿಗೆ ಮಣಿಪಾಲ ನಗರಸಭಾ ಉಪಕಚೇರಿಯಲ್ಲಿ ಹಾಗೂ ಆ. 14 ರಂದು ಗೋಪಾಲಪುರ, ನಿಟ್ಟೂರು, ಕೊಡಂಕೂರು, ಕಕ್ಕುಂಜೆ ಹಾಗೂ ಸುಬ್ರಹ್ಮಣ್ಯನಗರ ವಾರ್ಡ್ನ ಕಾರ್ಮಿಕರಿಗೆ ಅಂಬಾಗಿಲು ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಸಭಾಭವನದಲ್ಲಿ ಬೆಳಗ್ಗೆ 10 ರಿಂದ ನಡೆಯಲಿದೆ.
ಬೀದಿ ಬದಿ ವ್ಯಾಪಾರಸ್ಥರು, ಗೃಹ ಆಧಾರಿತ ಕಾರ್ಮಿಕರು, ಬಿಸಿಯೂಟ ಸಿಬ್ಬಂದಿಗಳು, ಹಮಾಲಿಗಳು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂ ರಹಿತ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮೋದ್ಯಮದ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರು ಹಾಗೂ ಇತರೆ ಉದ್ಯೋಗಗಳ ಕೆಲಸಗಾರರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.