ಕೊನೆಗೂ ಆಯ್ತು ಜಿಲ್ಲಾ ಉಸ್ತುವಾರಿ ಸಚಿವರ ನೇಮಕ:ಯಾವ ಜಿಲ್ಲೆಗೆ ಯಾರು ಉಸ್ತುವಾರಿ?

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ಇಬ್ಬರು ಪ್ರಮುಖ ಸಚಿವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಿಲ್ಲ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಐದು ತಿಂಗಳ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿದೆ. ಇಷ್ಟು ದಿನ ಸ್ವಾತಂತ್ರ್ಯ ದಿನಾಚರಣೆ ಮತ್ತು ನವೆಂಬರ್ 1ರಂದು ಧ್ವಜಾರೋಹಣ ಮಾಡಲು ಮಾತ್ರ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿತ್ತು. ಇದೀಗ ಪೂರ್ಣ ಪ್ರಮಾಣದಲ್ಲಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿದೆ. ಆದರೆ ಸಚಿವ ಆರ್ ಅಶೋಕ್ ಮತ್ತು ಸಚಿವ ಮಾಧುಸ್ವಾಮಿ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಿಲ್ಲ.

 

ಜಿಲ್ಲಾ ಉಸ್ತುವಾರಿ ಸಚಿವರು
ಬಸವರಾಜ ಬೊಮ್ಮಾಯಿ – ಬೆಂಗಳೂರು ನಗರ
ಗೋವಿಂದ ಕಾರಜೋಳ – ಬೆಳಗಾವಿ
ಕೆ. ಎಸ್. ಈಶ್ವರಪ್ಪ – ಚಿಕ್ಕಮಗಳೂರು
ಬಿ. ಶ್ರೀರಾಮುಲು – ಬಳ್ಳಾರಿ
ವಿ. ಸೋಮಣ್ಣ – ಚಾಮರಾಜನಗರ
ಉಮೇಶ್ ವಿ. ಕತ್ತಿ – ವಿಜಯಪುರ
ಎಸ್. ಅಂಗಾರ – ಉಡುಪಿ
ಆರಗ ಜ್ಞಾನೇಂದ್ರ – ತುಮಕೂರು
ಡಾ. ಸಿ. ಎನ್. ಅಶ್ವತ್ಥ ನಾರಾಯಣ – ರಾಮನಗರ
ಸಿ. ಸಿ. ಪಾಟೀಲ್ – ಬಾಗಲಕೋಟೆ
ಆನಂದ್ ಸಿಂಗ್ – ಕೊಪ್ಪಳ
ಕೋಟಾ ಶ್ರೀನಿವಾಸ ಪೂಜಾರಿ – ಉತ್ತರ ಕನ್ನಡ
ಪ್ರಭು ಚವ್ಹಾಣ – ಯಾದಗಿರಿ
ಮುರುಗೇಶ್‌ ನಿರಾಣಿ – ಕಲಬುರಗಿ
ಶಿವರಾಮ್ ಹೆಬ್ಬಾರ್ – ಹಾವೇರಿ
ಎಸ್. ಟಿ. ಸೋಮಶೇಖರ್ – ಮೈಸೂರು
ಬಿ. ಸಿ. ಪಾಟೀಲ್ – ಚಿತ್ರದುರ್ಗ ಮತ್ತು ಗದಗ
ಬಿ. ಎ. ಬಸವರಾಜ – ದಾವಣಗೆರೆ
ಡಾ. ಕೆ. ಸುಧಾಕರ್ – ಬೆಂಗಳೂರು ಗ್ರಾಮಾಂತರ
ಕೆ. ಗೋಪಾಲಯ್ಯ – ಹಾಸನ ಮತ್ತು ಮಂಡ್ಯ
ಶಶಿಕಲಾ ಜೊಲ್ಲೆ – ವಿಜಯನಗರ
ಎಂಟಿಬಿ ನಾಗರಾಜ್ – ಚಿಕ್ಕಬಳ್ಳಾಪುರ
ಕೆ. ಸಿ. ನಾರಾಯಣ ಗೌಡ – ಶಿವಮೊಗ್ಗ
ಬಿ. ಸಿ. ನಾಗೇಶ್‌ – ಕೊಡಗು
ವಿ. ಸುನೀಲ್ ಕುಮಾರ್ – ದಕ್ಷಿಣ ಕನ್ನಡ
ಹಾಲಪ್ಪ ಆಚಾರ್ – ಧಾರವಾಡ
ಶಂಕರ್ ಬಿ. ಮುನೇನಕೊಪ್ಪ – ರಾಯಚೂರು ಮತ್ತು ಬೀದರ್
ಮುನಿರತ್ನ – ಕೋಲಾರ