ಮನೆ ರಿಪೇರಿಗೆ ಅರಣ್ಯ ಇಲಾಖೆಯಿಂದ ಆಕ್ಷೇಪ: ಸ್ಥಳ ಪರಿಶೀಲನೆಗೆ ಆದೇಶಿಸಿದ ಉಸ್ತುವಾರಿ ಸಚಿವೆ

ಉಡುಪಿ: ಸೋಮವಾರ ನಡೆದ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಮದ ಮಾಧವ ವಾಗ್ಲೆಯವರು 5 ಸೆಂಟ್ಸ್ ಜಮೀನಿನಲ್ಲಿ ಹಳೆಯ ಮನೆ ಹೊಂದಿದ್ದು, ತಮ್ಮ ಹೆಸರಿಗೆ ಖಾತೆ, ಪಹಣಿ ಹೊಂದಿ ಅಲ್ಲಿಯೇ ವಾಸಿಸುತ್ತಿದ್ದು, ಮನೆಯ ರಿಪೇರಿಗೆ ಸ್ಥಳೀಯ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿದಾಗ ಅರಣ್ಯ ಇಲಾಖೆಯ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಆಕ್ಷೇಪಣೆ ಇದೆ ಎಂದು ಅನುಮತಿ ನೀಡಿರುವುದಿಲ್ಲ ಎಂದು ತಮ್ಮ ಸಮಸ್ಯೆಯನ್ನು ಅಹವಾಲು ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದಾಗ ಅಲ್ಲಿಯೇ ಇದ್ದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಕ್ಲಿಫರ್ಡ್
ಲೋಬೋ ಇವರಿಗೆ ಮಧ್ಯಾಹ್ನ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ
ಹೆಬ್ಬಾಳ್ಕರ್ ಸೂಚನೆ ನೀಡಿದರು. ಅದರನ್ವಯ ಅರಣ್ಯ ಸಂರಕ್ಷಣಾ ಅಧಿಕಾರಿ ಹಾಗೂ ಅರ್ಜಿದಾರರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.