ಬ್ರಹ್ಮಾವರ: ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಹಾಗೂ ಮಾರಾಟಗಾರ ಸಹಕಾರ ಸಂಘ( ವಿವಿಧೋದ್ದೇಶ ) ಮತ್ತು ಸಂಘದ ನೂತನ ಹವಾ ನಿಯಂತ್ರಿತ ಕಚೇರಿಯ ಶುಭಾರಂಭ ಕಾರ್ಯಕ್ರಮವು ಬ್ರಹ್ಮಾವರದ ಆಕಾಶವಾಣಿ ಸರ್ಕಲ್ ಬಳಿ ಕೃಷ್ಣಗಿರಿ ಕಾಂಪ್ಲೆಕ್ಸ್ ನಲ್ಲಿ ಗಣಪತಿ ಪೂಜೆಯೊಂದಿಗೆ ನಡೆಯಿತು.
ಸಹಕಾರ ಸಂಘದ ಅಧ್ಯಕ್ಷ ಶ್ರೀಧರ್ ಪಿಎಸ್ ಮಾತನಾಡಿ, ಬೇಕರಿ ಮತ್ತು ಇತರ ಆಹಾರ ತಯಾರಿಕಾ ಘಟಕಗಳನ್ನು ಮತ್ತು ಮಾರಾಟಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಹಕಾರ ಸಂಘವನ್ನು ಸ್ಥಾಪನೆ ಮಾಡಲಾಯಿತು. ಕಡಿಮೆ ಬಡ್ಡಿ ದರದಲ್ಲಿ ಸಂಘದ ಸದಸ್ಯರಿಗೆ ಯಂತ್ರೋಪಕರಣಗಳನ್ನು ಖರೀದಿಸಲು, ಹೊಸ ಘಟಕಗಳನ್ನು ಸ್ಥಾಪಿಸಲು, ವಾಹನಗಳನ್ನು ಖರೀದಿಸಲು ಹಣಕಾಸಿನ ನೆರವನ್ನು ನೀಡಲಾಗುವುದು. ಆಹಾರ ಉತ್ಪನ್ನಗಳ ಕ್ಷೇತ್ರದಲ್ಲಿ ಯುವ ಜನರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಘ ಕಾರ್ಯಾಚರಿಸಲಿದೆ ಎಂದರು.
ಉಡುಪಿ ಜಿಲ್ಲಾದ್ಯಂತ ಇರುವ ಎಲ್ಲಾ ಬೇಕರಿಗಳು, ತಿನಿಸುಗಳ ಉತ್ಪಾದಕ ಘಟಕಗಳು ಈ ಸಂಘದಲ್ಲಿ ನೋಂದಣಿ ಹೊಂದಿ ಎಲ್ಲ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬಹುದು ಎಂದು ಎಂದು ಸಹಕಾರ ಸಂಘದ ಉಪಾಧ್ಯಕ್ಷ ವಾಲ್ಟರ್ ಸಲ್ದಾನ ಹೇಳಿದರು.
ಪ್ರಧಾನ ಕಾರ್ಯದರ್ಶಿ ಸತ್ಯ ಪ್ರಸಾದ್ ಶೆಣೈ ಸ್ವಾಗತಿಸಿದರು. ಅಧ್ಯಕ್ಷ ವಿಶ್ವನಾಥ್ ಕುಲಾಲ್ ಸಂಘದ ಹಾದಿಯ ಬಗ್ಗೆ ವಿವರಿಸಿದರು. ನಿರ್ದೇಶಕ ದಿವಾಕರ್ ಸನಿಲ್ ಸಂಘಕ್ಕೆ ಶುಭ ಕೋರಿದರು. ಕೋಶಾಧಿಕಾರಿ ಶಶಿಕಾಂತ್ ನಾಯಕ್ ವಂದಿಸಿದರು.
ಸಂಘದ ಆಡಳಿತ ಮಂಡಳಿ, ಹಾಗೂ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.