ಹಿರಿಯಡಕ: ಅಕ್ಷಯಾಮೃತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 4ನೇ ವಾರ್ಷಿಕ ಮಹಾಸಭೆಯು ಸೆ.20 ರಂದು ಸುರಭಿ ಸಭಾಭವನ ಹಿರಿಯಡಕದಲ್ಲಿ ಅಪರಾಹ್ನ 3 ಗಂಟೆಗೆ ಸಂಘದ ಅಧ್ಯಕ್ಷರಾದ ಜನಾರ್ಧನ್ ಆರ್. ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಗತಿ ಪರ ಕೃಷಿಕ ಸುರೇಶ್ ನಾಯಕ್ ಮುಂಡುಜೆ ಯವರನ್ನು ಮತ್ತು ಜಾನಪದ ಕ್ಷೇತ್ರವನ್ನು ಗುರುತಿಸಿ ನೀರೆ ಬೈಲೂರಿನ ಶೇಷಿಯವರನ್ನು ಹಾಗೂ ಮಾಜಿ ಸೈನಿಕರಾದ ರಾಮ್‍ದಾಸ್ ದಾಮೋದರ ಸಾಲ್ವಂಕಾರ್, ಹರಿಕೃಷ್ಣ ಪೂಜಾರಿ, ಮನೋಹರ ನಾಯಕ್ ಸನ್ಮಾನಿಸಲಾಯಿತು ಮತ್ತು ಎಸ್ ಎಸ್ ಎಲ್‌ಸಿ’ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.
2024-25ರ ಸಾಲಿನ ಆಯವ್ಯಯ, ಆಸ್ತಿ ಜವಬ್ದಾರಿ ವಿವರ ಹಾಗೂ 2025-26ನೇ ಸಾಲಿನ ಮುಂಗಡ ಬಜೆಟ್ ಮಂಡಿಸಿದ ಸಿ ಇ ಓ ಶಶಿಕಾಂತ ಅವರು ಅಂಗೀಕಾರ ಪಡೆದರು. ಸಂಘದ ಒಟ್ಟು ವ್ಯವಹಾರ 15.52 ಕೋಟಿಯಷ್ಟು ಆಗಿದ್ದು, ನಿವ್ವಳ ಲಾಭ 3.5 ಲಕ್ಷದಷ್ಟು ಹಾಗೂ ಸದಸ್ಯರಿಗೆ 6% ಡಿವಿಡೆಂಡನ್ನು ಅಧ್ಯಕ್ಷರು ಘೋಷಿಸಿದರು.
ಉಪಾಧ್ಯಕ್ಷರಾದ ಶಾಂತರಾಮ್ ಸಾಲ್ವಂಕಾರ್, ನಿರ್ದೇಶಕರಾದ ಗಿರೀಶ್ ಪ್ರಭು, ಓಮೇಶ್ ನಾಯಕ್, ಆಶಾ ಕಾಮತ್, ಸಂಧ್ಯಾ ಕಾಮತ್, ದಯಾನಂದ ನಾಯಕ್ ಪಿ, ಉಪಸ್ಥಿತರಿದ್ದರು.
ನಿರ್ದೇಶಕರಾದ ರವೀಂದ್ರ ಕುಮಾರ್ ನಿರೂಪಿಸಿ, ಸದಾನಂದ ನಾಯಕ್ ರವರು ಸ್ವಾಗತಿಸಿದರು. ನಿರ್ದೇಶಕಿಯಾದ ವಿಜಯಲಕ್ಷ್ಮೀ ಸರಳಬೆಟ್ಟು ರವರು ವಂದಿಸಿದರು. ಕಾರ್ಯಕ್ರಮದ ಅಂಗವಾಗಿ “ರಾಮ ನಿರ್ಯಾಣ” ತಾಳಮದ್ದಳೆ ಜರುಗಿತು.












