udupixpress
Home Trending ಶ್ರೀಕೃಷ್ಣ ಜನ್ಮಾಷ್ಟಮಿಗೆ ಉಚಿತ ಬಿಲ್ವಪತ್ರೆ ಸಸಿ ವಿತರಣೆ

ಶ್ರೀಕೃಷ್ಣ ಜನ್ಮಾಷ್ಟಮಿಗೆ ಉಚಿತ ಬಿಲ್ವಪತ್ರೆ ಸಸಿ ವಿತರಣೆ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮೀ ಪ್ರಯುಕ್ತ ಉಡುಪಿ ವಲಯ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದ (ಪೆರ್ಡೂರು ನರ್ಸರಿ ) ಆಶ್ರಯದಲ್ಲಿ ಉಡುಪಿ ಪೇಜಾವರ ಮಠದ ಸಹಯೋಗದಲ್ಲಿ
ಸೆಪ್ಟೆಂಬರ್ 6ರಿಂದ 8ರ ವರೆಗೆ ಮೂರು ದಿನಗಳ ಕಾಲ ಉಡುಪಿ ಸಂಸ್ಕೃತ ಕಾಲೇಜು ಮಹಾವಿದ್ಯಾಲಯದ ಆವರಣದಲ್ಲಿ ಆಸಕ್ತ ಸಾರ್ವಜನಿಕರಿಗೆ ಉಚಿತವಾಗಿ ಬಿಲ್ವಪತ್ರೆ ಸಸಿಗಳನ್ನು ವಿತರಿಸಲಾಗುವುದು ಎಂದು ಪೇಜಾವರ ಮಠದ ಪ್ರಕಟಣೆ ತಿಳಿಸಿದೆ.

ಎರಡು ಸಾವಿರ ಸಸಿಗಳನ್ನು ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 94490 82198, 94484 51023, 98458 95136 ಸಂಪರ್ಕಿಸಬಹುದು.