ಕರಡು ಮತದಾರರ ಪಟ್ಟಿ ವಿತರಣೆ 

ಉಡುಪಿ: ಚುನಾವಣಾ ಆಯೋಗವು ಸಿದ್ಧಪಡಿಸಿದ ಕರಡು ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಮುಖಂಡರಿಗೆ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ಹಬೀಬ್ ಆಲಿ, ಬಿ.ಜೆ.ಪಿ ಮುಖಂಡ ಚಂದ್ರಶೇಖರ ಪ್ರಭು, ಜೆ.ಡಿ.ಎಸ್ ಮುಖಂಡ ಜಯರಾಮ್ ಆಚಾರ್ಯ, ಸಿ.ಪಿ.ಐ.ಎಂ ನ ಮೋಹನ್ ಉಪಸ್ಥಿತರಿದ್ದರು.