ಕಾರ್ಕಳ: ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ನಲ್ಲಿ ೭೪ನೇ ಸ್ವಾತಂತ್ರೋತ್ಸವದ ಅಂಗವಾಗಿ 74ಕ್ಕೂ ಜಾಸ್ತಿ ಅರ್ಹ ಜನರಿಗೆ ಮತಬೇಧವಿಲ್ಲದೇ ಉಚಿತ ಬಟ್ಟೆ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಕಾರ್ಕಳ ಪುರಸಭಾ ಸದಸ್ಯ, ಮುಸ್ಲಿಂ ಜಮಾತ್ ಅಧ್ಯಕ್ಷರಾದ ಜನಾಬ್ ಅಶ್ಪಕ್ ಅಹ್ಮದ್ ಮಾತನಾಡಿ, ಪೂರ್ಣಿಮಾ ಸಮೂಹ ಸಂಸ್ಥೆಗಳ ಸ್ಥಾಪಕ ಪಾಂಡುರಂಗ ಪ್ರಭುಗಳ ಸೇವೆಯನ್ನು ಮುಂದುವರಿಸುತ್ತಿರುವ ಪೂರ್ಣಿಮಾ ಸಿಲ್ಕ್ಸ್ನ ರವಿಪ್ರಕಾಶ್ ಪ್ರಭು ದಂಪತಿಗಳ ಕಾರ್ಯವನ್ನು ಅಭಿನಂದಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಕಾರ್ಕಳ ಗ್ರಾಮಾಂತರ ಅರಕ್ಷಕ ಠಾಣಾ ನಿರೀಕ್ಷಕರಾದ ನಾಸೀರ್ ಹುಸೇನ್ ಮಾತನಾಡಿ, ಸಂಸ್ಥೆಯು ಪ್ರಾರಂಭವಾಗಿ ಒಂದು ವರ್ಷದೊಳಗೆ ಬಡವರಿಗೆ ಬಟ್ಟೆ ಕೊಡುವುದರೊಂದಿಗೆ ಕರೋನಾ ಸಂದರ್ಭದಲ್ಲಿ ಕುಕ್ಕುಂದೂರಿನ ಹಾಗೂ ಅಸುಪಾಸಿನ ಜನರಿಗೆ ಆಹಾರ ಸಾಮಾಗ್ರಿಯನ್ನು ವಿತರಿಸಿದ ಕಾರ್ಯವನ್ನು ಶ್ಲಾಘಿಸಿದರು.
ಪೂರ್ಣಿಮಾ ಸಿಲ್ಕ್ಸ್ ಮಾಲಕರಾದ ಕೆ. ರವಿಪ್ರಕಾಶ್ ಪ್ರಭು ಅವರು ಮಾತನಾಡಿ, ತನ್ನ ಉದ್ಯಮದ ಆದಾಯದಿಂದ ಬಡಮಕ್ಕಳ ವಿದ್ಯಾದಾನದ ಜೊತೆಗೆ ಇನ್ನಿತರ ಸಾಮಾಜಿಕ ಕಾರ್ಯ ಮಾಡಲು ಗ್ರಾಹಕ ಬಂಧುಗಳ ಆಶೀರ್ವಾದವೇ ಕಾರಣ ಎಂದರು.
ಪೂರ್ಣಿಮಾ ಸಮೂಹ ಸಂಸ್ಥೆಗಳ ಹಿರಿಯರಾದ ಕೆ. ಉಮಾನಾಥ ಪ್ರಭು ಅವರು ಶುಭ ಹಾರೈಸಿದರು. ಪೂರ್ಣಿಮೋತ್ಸವ 2020 ಉಡುಗೊರೆಗಳನ್ನು ಕಾರ್ಕಳ ಶ್ರೀಮದ್ ಭುವನೇಂದ್ರ ವಿದ್ಯಾಶಾಲಾ ಸಂಚಾಲಕ, ಉದ್ಯಮಿ ಎಸ್. ನಿತ್ಯಾನಂದ ಪೈ ಬಿಡುಗಡೆಗೊಳಿಸಿದರು.
ಸಂಸ್ಥೆಯ ಪಾಲುದಾರರಾದ ಕಿರಣ ರವಿಪ್ರಕಾಶ್ ಪ್ರಭು ವಂದಿಸಿದರು. ಶಿವ ಎಡ್ವಟೈಸರ್ಸ್ ಮಾಲಕ ಆರ್. ವರದರಾಯ ಪ್ರಭು ಕಾರ್ಯಕ್ರಮ ನಿರೂಪಿಸಿದರು.