ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ಜ. 22ರಂದು ಅವಿಭಜಿತ ದ.ಕ ಜಿಲ್ಲೆಯ ದೇವಸ್ಥಾನಗಳಲ್ಲಿ ಅನ್ನ ಪ್ರಸಾದ ವಿತರಣೆ

ಉಡುಪಿ/ಮಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ (Ayodhya Ram Lalla Pran Pratishta) ದಿನಗಣನೆ ಆರಂಭಗೊಂಡಿದ್ದು, ಅವಿಭಜಿತ ದ.ಕ ಜಿಲ್ಲೆಯಾದ್ಯಂತ ಸಂಭ್ರಮ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ಜ. 22ರಂದು ದ.ಕ – ಉಡುಪಿ ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿಯೂ ಅನ್ನಪ್ರಸಾದ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಯಾ ಊರಿನ ಎಲ್ಲ ಪ್ರಮುಖ ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.

ರಾಮ ಮಂದಿರ ಪ್ರತಿಷ್ಠಾಪನೆಯ ನೇರವೀಕ್ಷಣೆಗಾಗಿ ಬೃಹತ್‌ ಎಲ್‌ಇಡಿ ಪರದೆ ಅಳವಡಿಸಲಾಗುತ್ತದೆ. ರಾಮನಾಪ ಜಪ, ಭಜನೆ ಸಂಕೀರ್ತನೆ, ಪಾನಕ, ಉಪಾಹಾರ, ಮಧ್ಯಾಹ್ನ ಪ್ರಮುಖ ದೇವಸ್ಥಾನಗಳಲ್ಲಿ ಅನ್ನಪ್ರಸಾದ ಸೇವೆ, ಸಂಜೆ ದೀಪೋತ್ಸವ ಸಹಿತ ಎಲ್ಲ ಮನೆಗಳಲ್ಲಿ ದೀಪ ಬೆಳಗಲಿದೆ ಎಂದು ರಾಮಮಂದಿರ ಉಡುಪಿ ನಗರ ಸಂಯೋಜಕ ಶಶಾಂಕ್‌ ಶಿವತ್ತಾಯ ತಿಳಿಸಿದ್ದಾರೆ.