ಕಾರ್ಕಳ: ಯುವ ಕಾಂಗ್ರೆಸ್ ಹುದ್ದೆಗಾಗಿ ಕಾಂಗ್ರೆಸ್ ಕಾರ್ಯಕರ್ತರು ಮಚ್ಚು ಲಾಂಗ್ ಗಳನ್ನು ಹಿಡಿದುಕೊಂಡು ಬಡಿದಾಡಿಕೊಂಡ ಘಟನೆ ಕಾರ್ಕಳ ಕಾಂಗ್ರೆಸ್ ಘಟಕದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಕಾರ್ಯಕರ್ತರ ಗಲಾಟೆ ಪ್ರಕರಣ ಪೊಲೀಸ್ ಠಾಣೆ ಮಟ್ಟಿಲೇರಿದ್ದು, ರಾಜಿ ಸಂಧಾನದ ಮೂಲಕ ಬಗೆಹರಿದಿದೆ. ಆದರೆ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಕಾರ್ಯಕರ್ತನೊಬ್ಬ ಅಸಹಾಯಕನಾಗಿದ್ದು, ಆತನ ಬೆಂಬಲಕ್ಕೆ ಯಾರು ಮುಂದಾಗಿಲ್ಲ ಎನ್ನಲಾಗಿದೆ.
ಕಾರ್ಕಳದ ಬಜಗೋಳಿಯಲ್ಲಿ ಕಾರ್ಯಕರ್ತರು ಲಾಂಗ್ ನಿಂದ ಹೊಡೆದಾಡಿಕೊಂಡಿದ್ದು,
ಪಕ್ಷದ ಆಂತರಿಕ ಹುದ್ದೆಗಾಗಿ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದು ಅತ್ಯಂತ ಹೀನಾ ಕೃತ್ಯ. ರೌಡಿಗಳಂತೆ ವರ್ತಿಸುವ ಕಾಂಗ್ರೆಸ್ ಕಾರ್ಯಕರ್ತರು ಯಾವ ಮುಖ ಹಿಡಿದುಕೊಂಡು ಜನರ ಮುಂದೆ ಬರುತ್ತಾರೆ?. ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಲ್ಲಿ ಇಷ್ಟು ದೊಡ್ಡ ಬೆಳವಣಿಗೆ ಆಗಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಕಾರ್ಯಕರ್ತರನ್ನು ಕರೆದು ಬುದ್ಧಿಮಾತು ಹೇಳುವ ಕಾರ್ಯವನ್ನು ಹಿರಿಯ ನಾಯಕರು ಮಾಡಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಇದೆಯೋ, ಇಲ್ಲವೋ ಎಂಬುವುದೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದಿದೆ.












