ಉಡುಪಿ: ಉಡುಪಿಯ ಕರಾವಳಿ ವೃತ್ತದ ಬಳಿಯ ಮಣಿಪಾಲ್ ಇನ್ ಹೋಟೆಲ್ ನಲ್ಲಿ ಪ್ರಥಮ ಬಾರಿಗೆ ನೂರಕ್ಕೂ ಹೆಚ್ಚು ಪ್ರಸಿದ್ಧ ಕಂಪನಿಗಳ ಬ್ರಾಂಡೆಡ್ ಗಾರ್ಮೆಂಟ್ಸ್ ಮಾರಾಟ ಮೇಳ ಮಾರ್ಚ್ 26ರಿಂದ 28ರ ವರೆಗೆ ನಡೆಯಲಿದೆ.
ಈಗಾಗಲೇ ಮಂಗಳೂರಿನ ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ಮೂರು ದಿನಗಳ ಮೇಳ ಆಯೋಜಿಸಿ ಯಶಸ್ವಿಯಾದ ಬಳಿಕ ಉಡುಪಿಯ ಕರಾವಳಿ ವೃತ್ತದ ಬಳಿಯ ಮಣಿಪಾಲ್ ಇನ್ ನಲ್ಲಿ ಆಯೋಜಿಸಲಾಗಿದೆ.
ಎಲ್ಲ ರೀತಿಯ ಸಾರ್ವಜನಿಕರಿಂದ ಸಹಕಾರವಾಗಬೇಕು, ಶಾಪಿಂಗ್ ಗೆ ಪೂರಕವಾಗಬೇಕು ಎಂಬ ಉದ್ದೇಶದಿಂದ ಬೆಳಗ್ಗೆ 10 ರಿಂದ ರಾತ್ರಿ 9ರವರೆಗೆ ಮೇಳ ನಡೆಯಲಿದೆ. ಈ ನಡುವೆ ವಾರಾಂತ್ಯದ ವೇಳೆ ಹೆಚ್ಚು ಸಾರ್ವಜನಿಕರು ಬರುವ ನಿರೀಕ್ಷೆಯಿಂದ ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಹಾಗೂ ಹೆಚ್ಚುವರಿ ಸ್ಟಾಕ್ ಗಳನ್ನು ಸಂಗ್ರಹಿಸಲಾಗಿದೆ. ಕೋವಿಡ್-19 ರಿಂದಾಗಿ ಮಾರುಕಟ್ಟೆಯಲ್ಲಿನ ಏರುಪೇರುಗಳನ್ನು ಸರಿದೂಗಿಸಲು ಈ ಮೇಳ ಆಯೋಜಿಸಲಾಗಿದೆ. ಕೋವಿಡ್-19ರ ಸಂದರ್ಭದಲ್ಲಿ ಕಾರ್ಮಿಕರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಉತ್ಪಾದನೆ ಸ್ಥಗಿತಗೊಳಿಸಲಿಲ್ಲ.
ಉತ್ಪಾದನೆಯಾದಷ್ಟು ಪ್ರಮಾಣದಲ್ಲಿ ಮಾರಾಟವಾಗದ ಹಿನ್ನೆಲೆಯಲ್ಲಿ ಹೆಚ್ಚು ಸಂಗ್ರಹ ಉಳಿದಿದೆ. ಈ ಸಂಗ್ರಹ ವಿಲೇವಾರಿ ಮಾಡುವ ಉದ್ದೇಶದಿಂದ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ದರದಲ್ಲಿ ಅಂದರೆ ಶೇ. 80 ವರೆಗೆ ರಿಯಾಯಿತಿಯನ್ನು ಮಾರಾಟ ಮೇಳದಲ್ಲಿ ಘೋಷಿಸಲಾಗಿದೆ. ಮಾರ್ಚ್ 28 ವರೆಗೆ ಮಾತ್ರ ಈ ಮೇಳ ನಡೆಯಲಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಕೋವಿಡ್-19 ನಿಂದ ದೇಶಾದ್ಯಂತ ಲಾಕ್ ಡೌನ್ ಇದ್ದುದರಿಂದ ಕೋಟ್ಯಾಂತರ ರೂ. ಬೆಲೆಬಾಳುವ ಗಾರ್ಮೆಂಟ್ಸ್ ಗಳು ಗೋಡೌನ್ ನಲ್ಲಿ ಭಾಗಿಯಾಗಿತ್ತು. ಇದನ್ನು ಕಂಪನಿಯ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ನೀಡಲು ಈ ಮೇಳ ಆಯೋಜಿಸಲಾಗಿದೆ. ರೀಟೇಲ್ ನಲ್ಲಿ 4000 ರೂ. ಇರುವ ಗಾರ್ಮೆಂಟ್ಸ್ ಗಳು ಈ ಮೇಳದಲ್ಲಿ ಕೇವಲ 350 ರೂಪಾಯಿನಿಂದ 550 ರೂ. ಒಳಗಡೆ ದರದಲ್ಲಿ ಲಭಿಸಲಿದೆ. ಬ್ರಾಂಡೆಡ್ ಫಾರ್ಮಲ್ ಶರ್ಟ್ ಕೇವಲ 650 ರೂ. ನಿಂದ 1000 ರೂ. ಒಳಗಡೆ ಲಭ್ಯವಿದೆ.
ಮೋಟೆ ಕಾರ್ಲೊ, ಬ್ಲ್ಯಾಕ್ ಬೆರ್ರಿ, ಇಂಡಿಗೋ ನೇಷನ್ ಸೇರಿದಂತೆ ದೇಶ-ವಿದೇಶದ ಪ್ರಖ್ಯಾತ ಕಂಪನಿಗಳ ಉತ್ಪನ್ನಗಳು ಈ ಮೇಳದಲ್ಲಿ ಇರಲಿದ್ದು, ರಿಯಾಯಿತಿ ದರದಲ್ಲಿ ಖರೀದಿಗೆ ಗ್ರಾಹಕರಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಗ್ರಾಹಕರು ಖರೀದಿಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಸೇರಿದಂತೆ ಎಲ್ಲ ಡಿಜಿಟಲ್ ಪಾವತಿ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.