ಕಾಪು ಸರ್ಕಾರಿ ಪಾಲಿಟೆಕ್ನಿಕ್ ನ ಡಿಪ್ಲೋಮಾ ಪ್ರವೇಶ ಅವಧಿ ಆಗಸ್ಟ್ 13 ರ ವರೆಗೆ ವಿಸ್ತರಣೆ

ಉಡುಪಿ: ಕಾಪು ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಪ್ರಸಕ್ತ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಕೋರ್ಸ್ ಗಳ ಪ್ರವೇಶ ದಾಖಲಾತಿಯನ್ನು ಆಗಸ್ಟ್ 13 ರ ವರೆಗೆ ವಿಸ್ತರಿಸಲಾಗಿದೆ.

ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ/ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಒಟ್ಟಾರೇ ಶೇ.35 ರಷ್ಟು ಅಂಕಗಳನ್ನು ಪಡೆದಿರುವ ಅರ್ಹ ಅಭ್ಯರ್ಥಿಗಳಿಂದ ಆಟೋಮೆಷನ್  ಅಂಡ್ ರೊಬೋಟಿಕ್ಸ್, ಕ್ಲೌಡ್ ಕಂಪ್ಯೂಟಿಂಗ್ ಅಂಡ್ ಬಿಗ್ ಡೇಟಾ ಎಂಬ ಎರಡು ನೂತನ ಕೋರ್ಸ್ ಗಳಿಗೆ ಬಾಕಿ ಉಳಿದಿರುವ ಸೀಟುಗಳಿಗೆ, ಸೂಕ್ತ ದಾಖಲಾತಿಗಳೊಂದಿಗೆ ನೇರವಾಗಿ ಸಂಸ್ಥೆಯಲ್ಲಿ ಆಫ್‌ಲೈನ್ ಮೂಲಕ ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಪ್ರವೇಶ ಪಡೆಯಲು ಅವಕಾಶವಿದೆ.

ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಪು ಸಂಸ್ಥೆಯ ಪ್ರಾಂಶುಪಾಲರನ್ನು ಮೊ.ಸಂ- 9480773870/8050015592 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.