ಕೃಷಿ ಕ್ಷೇತ್ರ ಕೃಷಿಕರಿಗೆ ವಿಪುಲ ಅವಕಾಶಗಳನ್ನು ತೆರೆದಿಡುತ್ತದೆ. ನಿತ್ಯ ಶ್ರಮ ವಹಿಸುವ ಶ್ರಮಿಕ ರೈತರಿಗೆ ಕೃಷಿಯೆ ಜೀವಾಳ.
ಇಲ್ಲೊಂದು ಕೃಷಿಕರೊಬ್ಬರ ಸಾಧನೆ ವಿಶೇಷವಾಗಿ ಗಮನ ಸೆಳೆಯುತ್ತಿದೆ.
ಇವರ ಹೆಸರು ದಿನೇಶ್ ಕುಮಾರ್ ಪೆರ್ನೆಬೆಟ್ಟು. ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕ್ರಿಯಾಶೀಲ ಕೃಷಿಕರಿವರು.
ತಮ್ಮ ಕೃಷಿ ಭೂಮಿಯಲ್ಲಿ ಮಿಶ್ರ ಬೆಳೆಗಳನ್ನು ಬೆಳೆದು ಉತ್ತಮ ಫಸಲನ್ನು ಪಡೆಯುತ್ತಿರುವ ಕೃಷಿಕ ದಿನೇಶ್ ಕುಮಾರ್ ಅವರ ಕತೆ ಇಲ್ಲಿದೆ.
ದಿನೇಶ್ ಕುಮಾರ್ ತಮ್ಮ ತೋಟದ ಬದಿಗಳಲ್ಲಿ 75 ತೆಂಗಿನ ಮರಗಳಿದ್ದು ವಾರ್ಷಿಕವಾಗಿ ಎರಡು ವರೆ ಸಾವಿರ ತೆಂಗಿನಕಾಯಿಗಳು, ತೋಟದ ಮಧ್ಯಭಾಗದಲ್ಲಿ ಫಲನೀಡುವ 1500ಅಡಿಕೆ ಗಿಡಗಳಿದ್ದು ಅದರಲ್ಲಿ ವಾರ್ಷಿಕ 34 ಕ್ವಿಂಟಾಲ್ ಅಡಿಕೆ, ಅಡಿಕೆ ಮರಗಳಿಗೆ ಕಾಳುಮೆಣಸು 200 ಗಿಡಗಳನ್ನು ನೆಟ್ಟಿದ್ದು 85 kg ಫಸಲನ್ನು ಪಡೆಯುತಿದ್ದಾರೆ.
ಅಡಿಕೆಯಲ್ಲಿ ಉತ್ತಮ ಗುಣಮಟ್ಟದ ಮಂಗಳ ,ವಿಟ್ಲ,ಹಾಗೂ ಮೋಹಿತ್ನಗರ್ ತಳಿಯ 400 ಹೊಸ ಗಿಡಗಳನ್ನು ನಾಟಿ ಮಾಡಿದ್ದಾರೆ.. ಹದಿನೈದು ಮಲ್ಲಿಗೆ ಗಿಡಗಳಿದ್ದು ಸಣ್ಣ ಪ್ರಮಾಣದ ಆದಾಯದ ಮೂಲವಾಗುತ್ತಿದೆ. ಎಚ್.ಎಫ್ ಜಾತಿಯ ದನಗಳಿದ್ದು ನಿತ್ಯ ನಲವತ್ತು ಲೀಟರ್ ಹಾಲನ್ನು ಡೈರಿಗೆ ನೀಡುತಿದ್ದಾರೆ.
ತಮ್ಮ ತೋಟಗಾರಿಕಾ ಬೆಳೆಗಳಿಗೆ ಸಾವಯವ ಗೊಬ್ಬರವನ್ನೆ ಬಳಸುತಿದ್ದಾರೆ.ರೈತ ಸಂಪರ್ಕ ಕೇಂದ್ರದ ಸಮಗ್ರ ಭೂ ಸಮೃದ್ದಿ ಯೋಜನೆ ಯಲ್ಲಿ ಕೃಷಿ ಹೊಂಡ ಬಯೊಡೈಜೆಸ್ಟ್ ಘಟಕವನ್ನು ನಿರ್ಮಾಣಮಾಡಿದ್ದಾರೆ. ಹಟ್ಟಿ ತೊಳೆದ ನೀರನ್ನುಸ್ಲರಿ ಪಂಪುಗಳ ಮೂಲಕ ಅಡಿಕೆ ಸಸಿಗಳಿಗೆ ಹಾಯಿಸುತಿದ್ದಾರೆ.ಇದರ ಜೊತೆಗೆ ಸುವರ್ಣ ಗೆಡ್ಡೆ ಕೃಷಿ , ಸಾವಿರ ಬಾಳೆ ತಳಿಯ ಕೃಷಿ ಹೊಸ ಪ್ರಯೋಗಗಳನ್ನು ಅಳವಡಿಸುತಿದ್ದಾರೆ.ಸ್ವಲ್ಪ ಶ್ರಮ ಮತ್ತು ತುಸು ಜಾಣ್ಮೆ ಇದ್ದರೆ ತೋಟಗಾರಿಕೆ ಕಷ್ಟಕರವಲ್ಲ, ಲಾಭದಾಯಕ. ಅದಕ್ಕೆ ಅವರ ಅನುಭವವೆ ಸಾಕ್ಷಿ
-ರಾಮ್ ಅಜೆಕಾರ್