ಉಡುಪಿ : ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್-ಡಿಜಿಟಲ್ ಹೆಲ್ತ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಸೌಲಭ್ಯವನ್ನು ಪಡೆಯಲು ಆಯುಷ್ಮಾನ್ ಭಾರತ್-ಹೆಲ್ತ್ ಐಡಿ (ಎ.ಬಿ.ಹೆಚ್.ಎ. ಐಡಿ) ಹೊಂದಿರುವುದು ಕಡ್ಡಾಯವಾಗಿರುತ್ತದೆ. ಇದರಲ್ಲಿ ರೋಗಿಯ ಅನುಮತಿ ಮೇರೆಗೆ ವೈದ್ಯಕೀಯ ಚಿಕಿತ್ಸೆಗಳ ವಿವರಗಳನ್ನು ನಮೂದಿಸಲಾಗುವುದು ಹಾಗೂ ಚಿಕಿತ್ಸೆ ಪಡೆದ ವಿವರವನ್ನು ಆನ್‌ಲೈನ್ ಮೂಲಕ ಸಕಾಲಕ್ಕೆ ವೀಕ್ಷಿಸಬಹುದಾಗಿದೆ.
ಸಾರ್ವಜನಿಕರು https://healthid.ndhm.gov.in/register ಲಿಂಕ್ ಅನ್ನು ಕ್ಲಿಕ್ ಮಾಡಿ ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ಆಧಾರ್ ಆಧಾರಿತ ಓ.ಟಿ.ಪಿ ವೆರಿಫಿಕೇಷನ್ ಮೂಲಕ ಎ.ಬಿ.ಹೆಚ್.ಎ. ಐಡಿ ಪಡೆಯಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.