ಬೆಂಗಳೂರು: ಮಾರ್ಕೆಟ್, ಬಸ್ ಗಳಿಲ್ಲದ ನಿಯಮ ಸಿನಿಮಾ ಥಿಯೇಟರ್ ಗೆ ಯಾಕೆ? ಸಿನಿಮಾ ಥಿಯೇಟರ್ ಗಳಲ್ಲಿ ಶೇ.50ರಷ್ಟು ಮಾತ್ರ ಪ್ರೇಕ್ಷಕರನ್ನು ಹೊಂದುವ ನಿಯಮದ ವಿರುದ್ಧ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಕಿಡಿಕಾರಿದ್ದಾರೆ. ಧ್ರುವ ಸರ್ಜಾ ಕಿಡಿಕಾರಿದ್ದಾರೆ.
ಮಾರಕ ಕೊರೋನಾ ವೈರಸ್ ನಿಯಂತ್ರಣ ಸಂಬಂಧ ಈ ಹಿಂದಿನ ಕೋವಿಡ್ ಮಾರ್ಗಸೂಚಿಯಂತೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಮಾತ್ರ ಪ್ರೇಕ್ಷಕರನ್ನು ಹೊಂದುವ ಮೂಲಕ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಈಗ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಇದೇ ಕಾರಣಕ್ಕೆ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಪ್ರೇಕ್ಷಕರ ಹೊಂದಲು ಅನುಮತಿ ನೀಡಬೇಕು ಎಂಬ ಕೂಗು ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಯಿಂದ ಬರುತ್ತಿದ್ದು ಇದೀಗ ಧ್ರುವ ಸರ್ಜಾ ಕೂಡ ಸಿನಿಮಾ ಥಿಯೇಟರ್ ಗೆ ನೀಡಿದ ನಿಯಮವನ್ನು ರದ್ದು ಮಾಡಬೇಕು ಎಂದಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಟ್ವೀಟ್ ಮಾಡಿದ ಅವರು, ಮಾರ್ಕೆಟ್ ಗಳಲ್ಲಿ ಜನ ಗಿಜಿಗುಡುತ್ತಿದ್ದಾರೆ. ಸಾವಿರಾರು ಮಂದಿ ಏಕಕಾಲದಲ್ಲಿ ಸಂಚರಿಸುತ್ತಿದ್ದಾರೆ. ಬಸ್ ನಲ್ಲೂ ಜನ ತುಂಬಿ ತುಳುಕುತ್ತಿದ್ದಾರೆ. ಆದರೆ ಇದಾವುದಕ್ಕೂ ಇಲ್ಲದ ನಿರ್ಬಂಧ ಥಿಯೇಟರ್ ಗಳಿಗೆ ಮಾತ್ರ ಏಕೆ ಎಂದು ಧ್ರುವ ಸರ್ಜಾ ಪ್ರಶ್ನಿಸಿದ್ದಾರೆ.ಇದೀಗ ಇವರ ಮಾತಿಗೆ ಸಿನಿಮಾ ಮಂಡಳಿ ಕೂಡ ಧ್ವನಿಗೂಡಿಸಿದೆ. ಅಂದ ಹಾಗೆ ನಟ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಪೊಗರು ಚಿತ್ರ ಫೆಬ್ರವರಿ 19ರಂದು ಪೊಗರು ಬಿಡುಗಡೆಯಾಗಲಿದೆ