ಧಾರವಾಡ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಆಗಸ್ಟ್ 13 ರಿಂದ 15 ರವರೆಗೆ ರಾಜ್ಯದ ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ ಅಭಿಯಾನದ ಯಶಸ್ಸಿಗೆ ಪೂರಕವಾಗಿ ಧಾರವಾಡದ ಸಂಜೀವಿನಿ ಮಹಿಳಾ ಸಂಸ್ಥೆ ಅವಿರತವಾಗಿ ಶ್ರಮಿಸುತ್ತಿರುವ ದೃಶ್ಯ. ಅವರ ಚೈತನ್ಯ, ಉತ್ಸಾಹ ಮತ್ತು ದೇಶಭಕ್ತಿ ಬಣ್ಣಿಸಲಾಗದು. ಜೈ ಹಿಂದ್ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಟ್ವಿಟರ್ ನಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
Happy to share that @KarnatakaKsrlps, Dharwad, SHG members are making flags to supply for #HarGharTiranga campaign, the dream project of Hon’ble PM @narendramodi Ji. We will leave no stone unturned to make it a big success. Jai Hind. pic.twitter.com/JdcLOkQPwI
— Basavaraj S Bommai (@BSBommai) August 3, 2022
ಧ್ವಜಗಳನ್ನು ಖರೀದಿಸಲು ಉದ್ದೇಶಿಸಿರುವ ಎಲ್ಲರೂ ಸರ್ಕಾರಿ ಖಾದಿ ವೆಬ್ಸೈಟ್ https://kviconline.gov.inನಲ್ಲಿ ಧ್ವಜಗಳನ್ನು ಆರ್ಡರ್ ಮಾಡಬಹುದು. ವೆಬ್ ಸೈಟನ್ನು ಸ್ಕ್ರೋಲ್ ಮಾಡಿ, ಖಾದಿ ಉತ್ಪನ್ನಗಳನ್ನು ಖರೀದಿಸಿ ಐಕಾನ್ ಮೇಲೆ ಕ್ಲಿಕ್ ಮಾಡಿ, ಹುಡುಕಾಟ ಪಟ್ಟಿಯಲ್ಲಿ ನ್ಯಾಷನಲ್ ಪ್ಲ್ಯಾಗ್ ಅನ್ನು ಟೈಪ್ ಮಾಡಿ ಧ್ವಜಗಳಿಗೆ ಆರ್ಡರ್ ನೀಡಿ ತರಿಸಿಕೊಳ್ಳಬಹುದು.