ಧರ್ಮಸ್ಥಳದ ಬುರುಡೆ ಕೇಸ್ ಗೆ ಸಿಕ್ಕಿತು ಮಹತ್ವದ ತಿರುವು: ಸ್ಥಳದಲ್ಲಿ ಸಿಕ್ತು ಕೆಂಪು ರವಿಕೆ, ಪ್ಯಾನ್ ಕಾರ್ಡ್

ಧರ್ಮಸ್ಥಳ: ಇಲ್ಲಿ ಎಸ್ ಐ ಟಿ ನಡೆಸುತ್ತಿರುವ ಉತ್ಖನನದ ವೇಳೆ ಅಗೆಯಲಾಗಿದ್ದ ಗುಂಡಿಯಲ್ಲಿ ಮಹತ್ವದ ವಸ್ತು ಸಿಕ್ಕಿದೆ. ಎಸ್ಐಟಿ ಅಧಿಕಾರಿಗಳಿಗೆ ಮಣ್ಣು ಅಗೆಯುವಾಗ ಕೆಂಪು ರವಿಕೆ, ಒಂದು ಪ್ಯಾನ್ ಕಾರ್ಡ್, ಡೆಬಿಟ್ ಕಾರ್ಡ್ ಸಿಕ್ಕಿದೆ. ಈ ವಸ್ತುಗಳು ತನಿಖೆಯ ಕುತೂಹಲಕ್ಕೆ ಕಾರಣವಾಗಿದ್ದು ಇದೀಗ ಎಸ್ ಐಟಿ ತಂಡ ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆದುಕೊಂಡಿದೆ.

ಧರ್ಮಸ್ಥಳದ ನೇತ್ರಾವತಿ ತಟದಲ್ಲಿ 1, 2,3 ನೇ ಪಾಯಿಂಟ್‌ನಲ್ಲಿ ಮಣ್ಣು ಅಗೆಯಲಾಗಿತ್ತು. 1, 2,3ನೇ ಪಾಯಿಂಟ್‌ನಲ್ಲಿ ಏನೂ ಸಿಕ್ಕಿರಲಿಲ್ಲ. ಆದ್ರೆ, ಇದೀಗ ಮಣ್ಣು ಅಗೆಯುವಾಗ ಪಾಯಿಂಟ್-1ರಲ್ಲಿ ಒಂದು ಪ್ಯಾನ್ ಕಾರ್ಡ್, ಡೆಬಿಟ್ ಕಾರ್ಡ್
ಪತ್ತೆಯಾಗಿದೆ.

ಸ್ಥಳ ಅಗೆಯುವ ಸಂದರ್ಭ ದೊರೆತ ಎರಡು ಐಡಿ ಕಾರ್ಡ್‌ ಸಿಕ್ಕಿದೆ ಎಂದು ದೂರುದಾರನ ಪರ ವಕೀಲ ಮಂಜುನಾಥ್‌ ಎನ್‌ ಹೇಳಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಎಸ್‌ಐಟಿ ಮೂಲಗಳನ್ನು ಆಧಾರಿಸಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಸೈಟ್ ಸಂಖ್ಯೆ 1 ರಲ್ಲಿ ಸುಮಾರು 2.5 ಅಡಿ ಆಳದಲ್ಲಿ ಹರಿದ ಕೆಂಪು ರವಿಕೆ, ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್ ಪತ್ತೆಯಾಗಿದೆ. ಒಂದು ಕಾರ್ಡ್‌ನಲ್ಲಿ ಪುರುಷನ ಹೆಸರು ಇದ್ದರೆ ಇನ್ನೊಂದು ಕಾರ್ಡ್‌ನಲ್ಲಿ ಲಕ್ಷ್ಮಿ ಎಂಬ ಮಹಿಳೆಯ ಹೆಸರು ಇದೆ.ಈ ಸಾಕ್ಷಿಗಳನ್ನು ತನಿಖೆಗೊಳಪಡಿಸಿದ ನಂತರವಷ್ಟೆ ಸತ್ಯಾಂಶಗಳು ಹೊರಬೀಳಲಿದೆ.