ಉಡುಪಿ: ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಎಲ್ಲ ಷಡ್ಯಂತ್ರ ಮತ್ತು ಅಪಪ್ರಚಾರಗಳಿಗೆ ಪೂರ್ಣ ವಿರಾಮ ಬೀಳಲೇಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾವೆಲ್ಲ ಧರ್ಮಸ್ಥಳದ ಭಕ್ತರು. ಹೆಗ್ಗಡೆಯವರ ಸಾಮಾಜಿಕ ಕೆಲಸ ಮೆಚ್ಚಿಕೊಂಡವರು. ಇದೀಗ ಎಸ್ಐಟಿ ತನಿಖೆ ನಡೆಯುತ್ತಿದೆ. ಷಡ್ಯಂತ್ರದ ಬಗ್ಗೆ ಡಿಸಿಎಂ ಅವರಿಗೆ ಗೊತ್ತಿದೆ. ನಾನು ಅವರ ಹೇಳಿಕೆಗೆ ದನಿಗೂಡಿಸುತ್ತೇನೆ. ಸದನದ ಒಳಗೂ ಡಿಕೆಶಿ ಷಡ್ಯಂತ್ರ ಅಂತ ಹೇಳಿದ್ದಾರೆ. ಎಲ್ಲದಕ್ಕೂ ಪೂರ್ಣವಿರಾಮ ಬೇಕು ಎಂದು ಹೇಳಿದರು.
ಷಡ್ಯಂತ್ರ ಮಾಡಿದವರಿಗೆ ಅಲ್ಲಿ ಏನೂ ಇಲ್ಲ ಎಲ್ಲ ಭೋಗಸ್ ಎಂದು ಗೊತ್ತಾಗಬೇಕು. ಸೋಶಿಯಲ್ ಮೀಡಿಯಾಗಳಲ್ಲೂ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಇದನ್ನು ನೀವೂ ಗಮನಿಸಿರಬಹುದು. ಸೌಜನ್ಯ ವಿಚಾರದಲ್ಲಿ ಒಬ್ಬ ಹೆಣ್ಣುಮಗಳಾಗಿ ನಾನು ಅವಳ ನ್ಯಾಯಕ್ಕೆ ಒತ್ತಾಯಿಸುತ್ತೇನೆ. ಆದರೆ ಈ ಅನಾಮಿಕ ಯಾರು? ಇವತ್ತು ಇಲ್ಲಿ ತೋರಿಸ್ತಾನೆ. ನಾಳೆ ಅಲ್ಲಿ ಇದೆ ಅಂತಾನೆ. ಇದಕ್ಕೆಲ್ಲ ಒಂದು ಪೂರ್ಣವಿರಾಮ ಬೇಕು ಎಂದು ಹೆಬ್ಬಾಳ್ಕರ್ ಹೇಳಿದರು.












