ಉಡುಪಿ: ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹ ಅಂಗವಾಗಿ ನವೆಂಬರ್ 28 ರಂದು ಮೂಲ್ಕಿ ರವೀಂದ್ರ ಪ್ರಭುರವರಿಂದ ಭಕ್ತಿ ಸಂಗೀತ ಕ್ರಾಯಕ್ರಮ ನಡೆಯಿತು. ಅವರನ್ನು ದೇವಳದ ವತಿಯಿಂದ ಗೌ ರವಿಸಲಾಯಿತು. ಬಳಿಕ ರಾತ್ರಿ ಶ್ರೀದೇವರ ಪೇಟೆ ಉತ್ಸವ ವಸಂತಪೂಜೆ , ಅಷ್ಟಾವಧಾನ ಸೇವೆ, ತೊಟ್ಟಿಲು ಸೇವೆ, ಮಹಾಪೂಜೆಯನ್ನು ಅರ್ಚಕ ಜಯದೇವ ಭಟ್ ನೆರವೇರಿಸಿದರು.
ಗಣಪತಿ ಭಟ್, ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಕಿಣಿ, ಕಾಶೀನಾಥ್ ಭಟ್ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಊರ ಪರ ಊರ ಸಂತ ಮಂಡಳಿಯ ಸಹಕಾರದೊಂದಿಗೆ ಅಹೋರಾತ್ರಿ ಭಜನೆ ನಡೆಯಿತು.